ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಗಿಂದಾಗೆ ಮರುಕಳಿಸುವ ಕೆಮ್ಮಿನ ಸಮಸ್ಯೆ ಗುಣಪಡಿಸಲು ಗಂಟಲು ಶಸ್ತ್ರಚಿಕಿತ್ಸೆ ಸಲುವಾಗಿ ಹಾಗೂ ಪಂಜಾಬ್‌ನಲ್ಲಿ ಚುನಾವಣೆಗೆ ಎಎಪಿಯ ಸಿದ್ಧತೆ ಅವಲೋಕನಕ್ಕಾಗಿ ರಾಜಧಾನಿಯಿಂದ 15 ದಿನಗಳ ಕಾಲ ದೂರವುಳಿಯಲಿದ್ದಾರೆ. ಕೇಜ್ರಿವಾಲ್ ಕೆಮ್ಮಿನ ಸಮಸ್ಯೆ ನಿವಾರಣೆಗೆ ಸೆ. 13ರಂದು ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಅಲ್ಲಿ 10 ದಿನಗಳ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.