ಕನ್ಯಾ ಪೂಜೆ ನೆಪ ಹೇಳಿ ಸಹೋದರಿಯರ ಕಿಡ್ನಾಪ್
ನವರಾತ್ರಿ ಹಬ್ಬದಂದು ದೇವಸ್ಥಾನಕ್ಕೆ ಆಗಮಿಸಿದ ಇಬ್ಬರು ಸಹೋದರಿಯರನ್ನು ಕನ್ಯಾ ಪೂಜೆ ನೆಪ ಹೇಳಿ ಅಪಹರಿಸಿದ ಘಟನೆ ಮಧ್ಯಪ್ರದೇಶ ಭೋಪಾಲ್ ನಗರದಲ್ಲಿ ನಡೆದಿದೆ.
ಇಬ್ಬರು ಮಕ್ಕಳನ್ನು ಮಾತಾ ಮಂದಿರದ ಆವರಣದಿಂದಲೇ ಅಪಹರಣ ಮಾಡಲಾಗಿದ್ದು ಭೋಪಾಲ್ ನಗರವನ್ನೇ ಬೆಚ್ಚಿ ಬೀಳಿಸಿದೆ. ಕಿಡ್ನಾಪ್ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.