ದೇಶದಲ್ಲಿ ಆಕ್ಸಿಜನ್ ಕೊರತೆ ; ಆಕ್ಸಿಜನ್ ಖರೀದಿಗೆ ಮುಂದಾಗಿರೋ ಕೇಂದ್ರ ಸರ್ಕಾರ

ಬುಧವಾರ, 21 ಏಪ್ರಿಲ್ 2021 (12:02 IST)
ನವದೆಹಲಿ : ಕೊರೊನಾ 2ನೇ ಅಲೆಯಲ್ಲಿ ರೋಗಿಗಳಿಗೆ ಆಕ್ಸಿಜನ್ ಕೊರತೆ ಉಂಟಾಗಿದ್ದು, ಆಕ್ಸಿಜನ್ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಹರಸಾಹಸ ಮಾಡುತ್ತಿದ್ದಾರೆ.

ಅದಕ್ಕಾಗಿ ಆಕ್ಸಿಜನ್ ಆಮದಿಗೆ ಮುಂದಾಗಿರೋ ಕೇಂದ್ರ ಸರ್ಕಾರ ಆಕ್ಸಿಜನ್ ಕಂಪೆನಿಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಕಾಡುತ್ತಿದೆ. ಹೀಗಾಗಿ  ಆಕ್ಸಿಜನ್ ಕೊರತೆ ಇನ್ನಷ್ಟು ಹೆಚ್ಚಾಗೋ ಸಾಧ್ಯತೆ ಇದೆ.

ಆದಕಾರಣ ಕೇಂದ್ರ ಸರ್ಕಾರ ವಿದೇಶದಿಂದ 50ಸಾವಿರ ಮೆಟ್ರಿಕ್ ಟನ್ ಖರೀದಿ ಮಾಡಿದೆ. ಆಕ್ಸಿಜನ್ ಎಕ್ಸ್ ಪ್ರೆಸ್ ರೈಲ್ವೆ ಮೂಲಕ ಆಕ್ಸಿಜನ್ ಹಂಚಿಕೆ ಮಾಡಲಾಗುತ್ತಿದೆ. ಆಕ್ಸಿಜನ್ ಕೊರತೆ ಇರೋ ರಾಜ್ಯಗಳಿಗೆ ರವಾನೆ ಮಾಡಲಾಗುತ್ತಿದ್ದು,  ಕರ್ನಾಟಕಕ್ಕೂ ಆಕ್ಸಿಜನ್ ಪೂರೈಕೆ ಮಾಡುವ  ಸಾಧ್ಯತೆ ಇದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ