ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ಬಹಳ ಗಂಭೀರವಾಗಿದೆ- ಸಿಎಂ ಅರವಿಂದ್ ಕ್ರೇಜಿವಾಲ್

ಸೋಮವಾರ, 19 ಏಪ್ರಿಲ್ 2021 (12:49 IST)
ನವದೆಹಲಿ : ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದೆಹಲಿಯಲ್ಲಿ ಕೊರೊನಾ ತೀವ್ರಗೊಂಡಿದೆ. ದೆಹಲಿಯಲ್ಲೂ ಮಹಾರಾಷ್ಟ್ರದಂತೆ ಜನತಾ ಕರ್ಪ್ಯೂ ಹಾಕಲಾಗಿದೆ. ಅಂಗಡಿ ಮಾರುಕಟ್ಟೆಗಳಿಗೆ ಸಂಜೆ 5ರವರೆಗೆ ಅವಕಾಶ ನೀಡಲಾಗಿದೆ. ಜನರ ಸಹಕಾರ ಇಲ್ಲದೇ ಕೊರೊನಾ ಕಂಟ್ರೋಲ್ ಅಸಾಧ್ಯ. ದೆಹಲಿಯಲ್ಲಿ ಕೊರೊನಾ ಕಂಟ್ರೋಲ್ ಗೆ ನಿರಂತರ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಅಲ್ಲದೇ ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಕೊರತೆ ಕಾಡುತ್ತಿದೆ. ಐಸಿಯು ಬೆಡ್ ಗಳ ಕೊರತೆಯೂ ಉಂಟಾಗುದೆ. ರೆಮ್ಡಿಸಿವಿರ್  ಇಂಜೆಕ್ಷನ್ ಕೊರತೆಯೂ ಇದೆ. ದೆಹಲಿಯಲ್ಲಿ ಅತಿ ಹೆಚ್ಚು ಕೊರೊನಾ ಟೆಸ್ಟಿಂಗ್ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ