ಶಶಿಕಲಾರನ್ನು ತೆಗೆದ್ರೆ ತಕ್ಕ ಪಾಠ ಕಲಿಸ್ತೇನೆ: ಎಐಎಡಿಎಂಕೆಗೆ ದಿನಕರನ್ ವಾರ್ನಿಂಗ್

ಶನಿವಾರ, 26 ಆಗಸ್ಟ್ 2017 (17:08 IST)
ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಸರಕಾರಕ್ಕೆ 19 ಶಾಸಕರು ನೀಡಿರುವ ಬೆಂಬಲ ವಾಪಸ್ ಪಡೆಯುವ ನಿರ್ಧಾರದ ಬಗ್ಗೆ ರಾಜ್ಯಪಾಲರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್, ವಿ.ಕೆ.ಶಶಿಕಲಾರನ್ನು ಪಕ್ಷದಿಂದ ಉಚ್ಚಾಟಿಸುವವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. 
ಪುದುಚೇರಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ 19 ಶಾಸಕರು, ಶಶಿಕಲಾರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿಸುವವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಶಾಸಕರು ನೀಡಿರುವ ಪತ್ರದ ಬಗ್ಗೆ ರಾಜ್ಯಪಾಲರು ಸೂಕ್ತ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.  
 
ಮುಖ್ಯಮಂತ್ರಿ ಎಡಪ್ಟಾಡಿ. ಕೆ ಪಳನಿಸ್ವಾಮಿ ಮತ್ತು ಬಂಡಾಯ ನಾಯಕ ಓ ಪನ್ನೀರ್‌ ಸೆಲ್ವಂ ಗುಂಪಿನ ನಡುವಿನ ವಿಲೀನದ ನಂತರ ಎಐಎಡಿಎಂಕೆ, ತನ್ನ ಪಕ್ಷದ ಸಾಮಾನ್ಯ ಮಂಡಳಿ ಸಭೆಯನ್ನು ಕರೆದು ಶಶಿಕಲಾನ್ನು ವಜಾಗೊಳಿಸುವ ನಿರ್ಣಯವನ್ನು ಮಂಡಿಸುವುದಾಗಿ ಘೋಷಿಸಿತ್ತು.
 
19 ಶಾಸಕರನ್ನು ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅನರ್ಹಗೊಳಿಸುವ ಬಗ್ಗೆ ಸಭಾಪತಿ ಪಿ.ಧನಪಾಲ್ ಕಳುಹಿಸಿದ ನೋಟಿಸ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ದೇವರನ್ನು ಹೊರತುಪಡಿಸಿ ಯಾರೂ ಹೆದರಿಸಲು ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ