ಮಹಿಳೆಯರು ಈ ವರ್ಷ ಎನ್ ಡಿಎ ಪರೀಕ್ಷೆಗಳನ್ನು ತೆಗೆದುಕೊಳ್ಳಲಿ, ಕೇಂದ್ರದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ
ಬುಧವಾರ, 22 ಸೆಪ್ಟಂಬರ್ 2021 (14:13 IST)
ನವದೆಹಲಿ : ಮಹಿಳೆಯರು ಈ ವರ್ಷ ಎನ್ ಡಿಎ ಪರೀಕ್ಷೆಗಳನ್ನು ತೆಗೆದುಕೊಳ್ಳಲಿ, ಮುಂದಿನ ವರ್ಷದವರೆಗೆ ಮುಂದೂಡುವ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಇದೇ ವೇಳೆ ನ್ಯಾಯಾಪೀಠ, 'ಮಹಿಳೆಯರಿಗೆ ನವೆಂಬರ್ 2021 ರ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಬೇಕು. ಒಂದು ವರ್ಷದವರೆಗೆ ಮುಂದೂಡಲು ಸಾಧ್ಯವಿಲ್ಲ. ವೈದ್ಯಕೀಯ ಮಾನದಂಡಗಳನ್ನು ತಾತ್ಕಾಲಿಕವಾಗಿ ಸೂಚಿಸಬೇಕು. ಯುಪಿಎಸ್ಸಿ ನವೆಂಬರ್ ಪರೀಕ್ಷೆಗೆ ಸರಿಪಡಿಸಿದ ಅಧಿಸೂಚನೆಯನ್ನು ಹೊರಡಿಸಲಿದೆ,' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷೆ ಹಾಜರಾಗಲು ಅವಕಾಶ ನೀಡುವ ಅಧಿಸೂಚನೆ ಮುಂದಿನ ವರ್ಷದ ಮೇ ವೇಳೆಗೆ ಹೊರಬರುತ್ತದೆ ಎಂದು ರಕ್ಷಣಾ ಸಚಿವಾಲಯ ಸುಪ್ರೀಂ ಕೋರ್ಟ್ ಗೆ ತಿಳಿಸಿದ ಒಂದು ದಿನದ ನಂತರ ಈ ನಿರ್ದೇಶನ ಬಂದಿದೆ.