ನವದೆಹಲಿ: ಕೆಲವು ಬದಲಾವಣೆಗಳೊಂದಿಗೆ ಕೇಂದ್ರ ಸರ್ಕಾರದ ಆಧಾರ ಕಾರ್ಡ್ ಜಾರಿ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆಧಾರ ಕಾರ್ಡ್ ಲಿಂಕ್ ಯಾವುದೇಕ್ಕೆ ಅಗತ್ಯವಾಗಿದೆ ಯಾವುದಕ್ಕೆ ಅಗತ್ಯವಾಗಿಲ್ಲ ಎನ್ನುವ ಬಗ್ಗೆ ತೀರ್ಪಿನಲ್ಲಿ ಸ್ಪಷ್ಟನೆ ನೀಡಿದೆ. ಯಾವುದಕ್ಕೆ ಆಧಾರ ಕಾರ್ಡ್ ಬೇಕು, ಯಾವುದಕ್ಕೆ ಆಧಾರ ಕಾರ್ಡ್ ಬೇಡ ಎನ್ನುವ ಬಗ್ಗೆ ಸ್ಪಷ್ಟ ಸಂದೇಶ ಸಾರಿದೆ.
ಐಟಿಆರ್ ದಾಖಲಿಸಲು ಆಧಾರ ಕಾರ್ಡ್ ಕಡ್ಡಾಯ
ಪಿಡಿಎಸ್ ಸೇರಿದಂತೆ ಸರಕಾರಿ ಯೋಜನೆಗಳ ಫಲಾನುಭವಿಗಳಾಗಲು ಆಧಾರ ಕಾರ್ಡ್ ಬೇಕೇ ಬೇಕು.
ಇವೆಲ್ಲಾ ಸೇವೆಗಳಿಗೆ ಆಧಾರ ಕಾರ್ಡ್ ಕಡ್ಡಾಯವಲ್ಲ
ಸಿಬಿಎಸ್‌ಇ ಪರೀಕ್ಷೆ, ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೇನ್ಸ್ ಟೆಸ್ಟ್ ಫಾರ್ ಮೆಡಿಕಲ್ ಎಂಟ್ರೆನ್ಸ್, ಯುಜಿಸಿಗಳಿಗೆ ಆಧಾರ ಕಾರ್ಡ್ ಅಗತ್ಯವಿಲ್ಲ.
ಆಧಾರ ಕಾರ್ಡ್ ವಿವರಗಳ ಬೇಕು ಎಂದು ಮೊಬೈಲ್ ಕಂಪೆನಿಗಳು ಒತ್ತಾಯಿಸುವಂತಿಲ್ಲ
ಖಾಸಗಿ ಕಂಪೆನಿಗಳು ಆಧಾರ ಕಾರ್ಡ್ ವಿವರಗಳು ಪಡೆಯುವ ಅಧಿಕಾರವಿಲ್ಲ