ಲಕ್ಷಗಟ್ಟಲೆ ಜನ ಬರುವ ಧರ್ಮಸ್ಥಳದಲ್ಲಿ ಈಗ ಬರುವ ಜನರ ಸಂಖ್ಯೆಯೆಷ್ಟು ಗೊತ್ತಾ?

ಸೋಮವಾರ, 6 ಏಪ್ರಿಲ್ 2020 (09:28 IST)
ಮಂಗಳೂರು: ದ.ಕ. ಜಿಲ್ಲೆಯ ಪ್ರಸಿದ್ಧ ದೇಗುಲ ಧರ್ಮಸ್ಥಳದಲ್ಲಿ ಪ್ರತಿನಿತ್ಯ ಸಾವಿರಾರು ಜನರು ಆಗಮಿಸಿ ಮಂಜುನಾಥ ಸ್ವಾಮಿ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ತೆರಳುತ್ತಾರೆ.


ಆದರೆ ಕೊರೋನಾವೈರಸ್ ನಿಂದಾಗಿ ಲಾಕ್ ಡೌನ್ ಜಾರಿಯಲ್ಲಿದ್ದು, ಯಾವುದೇ ವಾಹನಗಳು ಓಡಾಡುತ್ತಿಲ್ಲ. ಜನರೂ ಮನೆಯಿಂದ ಹೊರಬರುವಂತಿಲ್ಲ.

ಸಹಜವಾಗಿಯೇ ಧರ್ಮಸ್ಥಳದಲ್ಲೂ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಲಕ್ಷಗಟ್ಟಲೆ ಜನರು ಸಂದರ್ಶಿಸುತ್ತಿದ್ದ ದೇವಾಲಯದಲ್ಲಿ ಈಗ ಸಾರ್ವಜನಿಕರಿಗೆ ಪ್ರವೇಶವಿದ್ದರೂ ಪ್ರತಿನಿತ್ಯ ಇಪ್ಪತ್ತರಿಂದ ಮೂವತ್ತರಷ್ಟು ಭಕ್ತರು ಮಾತ್ರ ಆಗಮಿಸುತ್ತಿದ್ದಾರೆ. ಅದೂ ಸ್ಥಳೀಯರು ಮಾತ್ರ. ಅಂತೂ ಧರ್ಮಸ್ಥಳ ಮಂಜುನಾಥನಿಗೂ ಕೊರೋನಾ ಬಿಸಿ ತಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ