ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತ ದೊಡ್ಡ ಘಟನೆಯಲ್ಲ: ಹೇಮಾ ಮಾಲಿನಿ

Sampriya

ಮಂಗಳವಾರ, 4 ಫೆಬ್ರವರಿ 2025 (16:46 IST)
Photo Courtesy X
ನವದೆಹಲಿ: ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತವು ದೊಡ್ಡ ಘಟನೆಯಲ್ಲ. ಆದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಕುಂಭಮೇಳದ ನಿರ್ವಹಣೆಯು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಬಿಜೆಪಿ ಸಂಸದೆ, ನಟಿ ಹೇಮಾ ಮಾಲಿನಿ ಹೇಳಿದ್ದಾರೆ.

ಈ ಕುರಿತು ಸಂಸತ್ ಆವರಣದಲ್ಲಿ ಮಾತನಾಡಿದ ಅವರು, ನಾವು ಕೂಡ ಕುಂಭಕ್ಕೆ ಹೋಗಿದ್ದೇವೆ. ಪವಿತ್ರ ಸ್ನಾನವನ್ನು ಮಾಡಿದ್ದೇವೆ. ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಲಾಗಿದೆ ಎಂದರು.

ಕಾಲ್ತುಳಿತ ನಡೆದಿರುವುದು ನಿಜ. ಆದರೆ ದೊಡ್ಡ ಘಟನೆಯಲ್ಲ. ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಕುಂಭಮೇಳವನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕುಂಭಮೇಳದಲ್ಲಿ ಮೃತಪಟ್ಟವರ ಅಂಕಿಯನ್ನು ಮರೆಯಲಾಗುತ್ತಿದೆ ಎಂಬ  ಆರೋಪಕ್ಕೆ ಪ್ರತಿಕ್ರಿಯಿಸಿರುವ ಹೇಮಾ, 'ಇದು ಅವರ (ವಿಪಕ್ಷಗಳ) ಕೆಲಸ. ಅವರಿಗೆ ತೋಚಿದ್ದನ್ನು ಹೇಳುತ್ತಲೇ ಇರುತ್ತಾರೆ' ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ