ಆಸ್ಪತ್ರೆಯ ಆವರಣದಲ್ಲಿ ವಿವಸ್ತ್ರನಾಗಿ ಓಡಾಡಿದ ವೈದ್ಯ
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಯಾವುದೇ ಬಟ್ಟೆಯಿಲ್ಲದೇ ವೈದ್ಯ ಆಸ್ಪತ್ರೆ ತುಂಬಾ ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶೌಚಾಲಯಕ್ಕೆ ತೆರಳುವಾಗ ವೈದ್ಯ ಒಂದು ಬಟ್ಟೆಯನ್ನು ಹಿಡಿದುಕೊಂಡಿರುತ್ತಾನೆ. ಬಳಿಕ ಅದೂ ಇಲ್ಲದೇ ವಿವಸ್ತ್ರನಾಗಿ ಓಡಾಡುತ್ತಾನೆ.
ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ವೈದ್ಯ ಮಾದಕ ವಸ್ತು ವ್ಯಸನಿಯಾಗಿದ್ದ. ಮಾದಕ ವಸ್ತು ಸೇವಿಸಿದಾಗ ಈ ರೀತಿ ಮಾನಸಿಕ ಅಸ್ವಸ್ಥನಂತೆ ನಡೆದುಕೊಳ್ಳುತ್ತಾನೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹೇಳಿದ್ದಾರೆ.
ಇದೀಗ ಘಟನೆ ಬಗ್ಗೆ ದೂರು ದಾಖಲಾಗಿದೆ. ತಪ್ಪಿತಸ್ಥ ವೈದ್ಯನ ವಿರುದ್ಧ ತಕ್ಕ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ಆದರೆ ಜನರ ಆರೋಗ್ಯ ನೋಡಿಕೊಳ್ಳಬೇಕಾದ ವೈದ್ಯರೇ ಈ ರೀತಿ ಆಡಿದರೆ ಉಳಿದವರ ಗತಿಯೇನು?