ಅಶ್ಲೀಲ ಫೋಟೋ ತೋರಿಸಿ ಗೆಳತಿಗೆ ಬ್ಲ್ಯಾಕ್ ಮೇಲ್
ಇತ್ತೀಚೆಗೆ ಯುವತಿ ಆರೋಪಿಯ ಜೊತೆ ಸಂಬಂಧ ಕಡಿದುಕೊಂಡಿದ್ದಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ಅನ್ ಫ್ರೆಂಡ್ ಮಾಡಿದ್ದಳು. ಅದಾದ ಬಳಿಕ ಹಿಂದೆ ರೆಕಾರ್ಡ್ ಮಾಡಿಕೊಂಡಿದ್ದ ಆಕೆಯ ವಿಡಿಯೋ, ಫೋಟೋಗಳನ್ನು ತೋರಿಸಿ 50 ಸಾವಿರ ರೂ. ನೀಡದೇ ಇದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.