2 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ರೈಲ್ವೇ ಹಳಿ ಮೇಲೆ ಬಿಸಾಕಿದ ನೀಚ

ಸೋಮವಾರ, 19 ನವೆಂಬರ್ 2018 (08:55 IST)
ನವದೆಹಲಿ: 2 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ರೈಲ್ವೇ ಹಳಿ ಮೇಲೆ ಬಿಸಾಕಿ ಪರಾರಿಯಾದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ದೆಹಲಿ ರೈಲ್ವೇ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. 24 ವರ್ಷದ ಅನಿಲ್ ಎಂಬಾತ ಈ ಆರೋಪಿ ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.

ರಸ್ತೆ ಬದಿಯಲ್ಲಿ ಅಮ್ಮನ ಜತೆ ಮಲಗಿದ್ದ ಮಗುವನ್ನು ಆರೋಪಿ ಅನಿಲ್ ಅಪಹರಣ ಮಾಡಿದ್ದ. ಬೆಳಿಗ್ಗೆ ಮಗು ಇಲ್ಲದನ್ನು ಕಂಡ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಒಂದು ದಿನದ ಬಳಿಕ ಮಗು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದೀಗ ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆರೋಗ್ಯ ಸುಧಾರಿಸುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ