ಬಸ್ ನಲ್ಲಿ ಹೋಗಲು ಇಷ್ಟವಿಲ್ಲವೆಂದು ಬೈಕ್ ಕದ್ದ ಭೂಪ!
23 ವರ್ಷದ ಚೆನ್ನೈನ ಯುವಕ ಕೆಲಸಗಳಿಗೆ ಓಡಾಡಲು ಬಸ್ ನಲ್ಲಿ ಪ್ರಯಾಣಿಸಿದರೆ ಸಾಕಷ್ಟು ಸಮಯವಾಗುತ್ತಿತ್ತು. ಇದು ಆತನಿಗೆ ಇಷ್ಟವಿರಲಿಲ್ಲ. ಈ ಕಾರಣಕ್ಕೆ ಪಲ್ಸರ್ ಬೈಕ್ ಒಂದನ್ನು ಕದ್ದಿದ್ದ.
ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಈತ ಈಗ ಬೈಕ್ ಕದ್ದು ಸಿಕ್ಕಿಬಿದ್ದಿದ್ದಾನೆ. ಸಿಸಿಟಿವಿ ದೃಶ್ಯ ಆಧರಿಸಿ ಬೈಕ್ ಖದೀಮನನ್ನು ಪತ್ತೆ ಹಚ್ಚಲಾಗಿತ್ತು.