ವಧು ವ್ಯಾಟ್ಸಪ್ ನಲ್ಲೇ ಕಾಲ ಕಳೆಯುತ್ತಾಳೆಂದು ಮದುವೆಯನ್ನೇ ರದ್ದುಪಡಿಸಿದರು!

ಭಾನುವಾರ, 9 ಸೆಪ್ಟಂಬರ್ 2018 (10:17 IST)
ಲಕ್ನೋ: ಇದು ವ್ಯಾಟ್ಸಪ್ ಕಾಲ. ಆದರೆ ಇದೇ ಚಾಳಿ ಇದೀಗ ಯುವತಿಯೊಬ್ಬಳಿಗೆ ವಿವಾಹವೇ ಮುರಿದು ಬೀಳುವಂತೆ ಮಾಡಿದೆ.

ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ವಧು ಹೆಚ್ಚಾಗಿ ವ್ಯಾಟ್ಸಪ್ ನಲ್ಲೇ ಕಾಲ ಕಳೆಯುತ್ತಾಳೆಂದು ವರನ ಕಡೆಯವರು ಮದುವೆಯನ್ನೇ ರದ್ದುಗೊಳಿಸಿದ್ದಾರೆ.

ಆದರೆ ವಧುವಿನ ಕುಟುಂಬ ಇದನ್ನು ನಿರಾಕರಿಸಿದ್ದು, ಅವರಿಗೆ ಕೇಳಿದಷ್ಟು ವರದಕ್ಷಿಣೆ ಕೊಡಲಿಲ್ಲವೆಂಬ ಕಾರಣಕ್ಕೆ ವ್ಯಾಟ್ಸಪ್ ನೆಪ ಹೇಳಿ ಮದುವೆ ರದ್ದುಗೊಳಿಸಿದ್ದಾರೆಂದು ಆರೋಪಿಸಿದೆ.  ವರನ ಕಡೆಯವರು 65 ಲಕ್ಷ ರೂ. ವರದಕ್ಷಿಣೆ ಕೇಳಿದ್ದರು ಎಂದು ವಧು ಕುಟುಂಬ ಆಪಾದಿಸಿದೆ. ಅದೇನೇ ಇರಲಿ ಇದೀಗ ಮದುವೆಯಂತೂ ರದ್ದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ