‘ನೀವು ಯಾವಾಗ ಮದುವೆಯಾಗುತ್ತೀರಿ’ ಎಂದು ಕೇಳಿದ ಗರ್ಭಿಣಿಯನ್ನೆ ಕೊಂದ ಪಾಪಿ

ಶನಿವಾರ, 8 ಸೆಪ್ಟಂಬರ್ 2018 (11:47 IST)
ಇಂಡೋನೇಷಿಯಾ : ‘ನೀವು ಯಾವಾಗ ಮದುವೆಯಾಗುತ್ತೀರಿ ?’ ಎಂದು ಕೇಳಿದ್ದಕ್ಕೆ ನೆರೆಮನೆಯ ಗರ್ಭಿಣಿ ಮಹಿಳೆಯೊಬ್ಬಳನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ.


ಇಂಡೋನೇಷಿಯಾದ ಕಮಂಗ್ ಪಾಸಿರ್ ಜಾಂಜೆಯಲ್ಲಿ  ಫೈಝ್ ನೂರ್ಡಿನ್ ಎಂಬ 28 ವರ್ಷದ ವ್ಯಕ್ತಿ ತನ್ನ ಮನೆಯ ಹೊರಗೆ ಕುಳಿತಿದ್ದಾಗ ನೆರೆ ಮನೆಯ ಮಹಿಳೆ ಐಸಿಯಾ ಆತನ ಬಳಿಗೆ ಬಂದು,’’ ನೀವು ಯಾವಾಗ ಮದುವೆಯಾಗುತ್ತೀರಿ. ನಿಮ್ಮ ವಯಸ್ಸಿನವರು ಈಗಾಗಲೇ ವಿವಾಹವಾದರು. ನೀವು ಯಾಕೆ ಮದುವೆಯಾಗುತ್ತಿಲ್ಲ” ಎಂದು ಕೇಳಿದ್ದಾಳೆ.


ಆಕೆ ಪದೇ ಪದೇ ಇದೇ ಪ್ರಶ್ನೆಯನ್ನು ಕೇಳುತ್ತಿರುವುದನ್ನು ಕಂಡು ಕೋಪಗೊಂಡ ವ್ಯಕ್ತಿ ಆ ದಿನ ಆಕೆಯನ್ನು ಹೊಡೆದು ಕೊಂದಿದ್ದಾನೆ. ಈ ಘಟನೆ ಇಂಡೋನೇಷಿಯಾದ ವೆಬ್ಸೈಟ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಬಾರೀ ಸುದ್ದಿಯಾಗಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ