ಹಣದ ವಿಚಾರಕ್ಕೆ ಅಪ್ರಾಪ್ತನಿಗೆ ಬೂಟು ನೆಕ್ಕಲು ಹೇಳಿದವರು ಅರೆಸ್ಟ್

ಸೋಮವಾರ, 15 ಮಾರ್ಚ್ 2021 (06:41 IST)
ಜಬಲ್ಪುರ : ಹಣದ ವಿಚಾರಕ್ಕೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ನಿರ್ದಯವಾಗಿ ಥಳಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಸಂತ್ರಸ್ತ ಹಾಗೂ ಆರೋಪಿಗಳ ನಡುವೆ 2000 ರೂ.ಗಳ ವಿಚಾರಕ್ಕೆ ಜಗಳ ಏರ್ಪಟ್ಟಿದೆ. ಆರೋಪಿಗಳು ಸಂತ್ರಸ್ತನನ್ನು ಹೊಲಕ್ಕೆ ಕರೆದೊಯ್ದು, ನಿಷ್ಕರುಣೆಯಿಂದ ಹೊಡೆದು ಅವರ ಬೂಟುಗಳನ್ನು ನೆಕ್ಕುವಂತೆ ಹಾಗೂ ಸಿಗರೇಟು ಸೇದುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಂತ್ರಸ್ತ ಮನೆಯವರಿಗೆ ವಿಚಾರ ತಿಳಿಸಿದ್ದಾನೆ. ಹಾಗೇ ಆತನಿಗೆ ಥಳಿಸಿದ ವಿಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ