ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆದು ಕೇಸ್ ದಾಖಲಾಗಿದೆ.
ಇನ್ನೊಂದೆಡೆ ಸಚಿವ ಬಿ.ಶ್ರೀರಾಮುಲು ಅಕ್ರಮ ಸಂಪಾದನೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರೋದು ಚರ್ಚೆಗೆ ಕಾರಣವಾಗಿದೆ.
ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಅವರು ಮಾತನಾಡಿ, ಸಚಿವ ಶ್ರೀರಾಮುಲು ಅವರು 100 ಕೋಟಿ ರೂ.ಗಳ ಮೌಲ್ಯದ ನಿವಾಸ ಕಟ್ಟಿದ್ದಾರೆ. ಆ ಮನೆ ಕಟ್ಟಲು ಹಣ ಎಲ್ಲಿಂದ? ಹೇಗೆ ಬಂದಿದೆ? ಎಂದು ಪ್ರಶ್ನಿಸಿದ್ದಾರೆ.
ಬಿ.ಶ್ರೀರಾಮುಲು ಅಕ್ರಮ ಹಣ ಸಂಪಾದನೆ ವಿರುದ್ಧ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹಿರೇಮಠ ಹೇಳಿದ್ದಾರೆ.
ಈ ನಡುವೆ, ಡಿ.ಕೆ.ಶಿವಕುಮಾರ್ ಅವರ ಮೇಲೆ ಸಿಬಿಐ ದಾಳಿ ನಡೆದಿರುವುದನ್ನು ಸ್ವಾಗತಿಸಿರುವ ಅವರು, ಡಿಕೆಶಿ ಗಳಿಸಿದ್ದು ಜನರ ಹಣ ಎಂದು ಆರೋಪಿಸಿದ್ದಾರೆ.