ನವದೆಹಲಿ : ಭಾರತದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಿಕೆ ಪೂರ್ಣಗೊಂಡಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು ಸೃಷ್ಟಿಯಾಗಿದೆ.
ಫೆಬ್ರವರಿ 19ಕ್ಕೆ 1 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಏಪ್ರಿಲ್ 10ರ ವೇಳೆಗೆ 10 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಇದೀಗ ಇಂದು (ಅ.21) 100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಂಡಿದ್ದು, ಲಸಿಕಾ ಅಭಿಯಾನದಲ್ಲಿ ಭಾರತ ದಾಖಲೆ ಮಾಡಿದೆ. 18- 44 ವಯಸ್ಸಿನವರಿಗೆ 55.44 ಕೋಟಿ ಡೋಸ್ ಲಸಿಕೆ, 45-60 ವಯಸ್ಸಿನವರಿಗೆ 26.95 ಕೋಟಿ ಡೋಸ್ ಲಸಿಕೆ, 60 ವರ್ಷ ಮೇಲ್ಪಟ್ಟವರಿಗೆ 17.03 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು, 51.55 ಕೋಟಿ ಪುರುಷರು ಹಾಗೂ 47.86 ಕೋಟಿ ಮಹಿಳೆಯರು ಲಸಿಕಾ ಅಭಿಯಾನದ ಫಲಾನುಭವಿಗಳಾಗಿದ್ದಾರೆ. ದೇಶದಲ್ಲಿ ಶತಕೋಟಿ ಲಸಿಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮುಖಾಂತರ ಶುಭ ಕೋರಿದ್ದಾರೆ.