ಮೋದಿ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ : ಚಿದಂಬರಂ

ಶನಿವಾರ, 30 ಏಪ್ರಿಲ್ 2022 (11:06 IST)
ನವದೆಹಲಿ : ವಿದ್ಯುತ್ ಕೊರತೆಗೆ ಮೋದಿ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ, ಇದಕ್ಕೆಲ್ಲಾ 60 ವರ್ಷಗಳ ಕಾಂಗ್ರೆಸ್ ಆಡಳಿತವೇ ಕಾರಣ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವ್ಯಂಗ್ಯವಾಡಿದರು.

ಹಲವಾರು ರಾಜ್ಯಗಳು ಕಲ್ಲಿದ್ದಲು ಕೊರತೆ ಸಮಸ್ಯೆಯನ್ನು ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ವಿದ್ಯುತ್ ಬಿಕ್ಕಟ್ಟನ್ನು ಪರಿಹರಿಸಲು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿರುವ ಸರ್ಕಾರದ ಕ್ರಮದ ವಿರುದ್ಧ ಟ್ವೀಟ್ ಮಾಡಿ ಟೀಕಿಸಿದರು.

ಹೇರಳವಾದ ಕಲ್ಲಿದ್ದಲು, ಹಾಗೂ ಉಷ್ಣ ಸ್ಥಾವರಗಳಲ್ಲಿ ಬಳಕೆಯಾಗದಷ್ಟು ಸಾಮರ್ಥ್ಯವಿದೆ. ಆದರೂ ದೇಶದಲ್ಲಿ ತೀವ್ರವಾದ ವಿದ್ಯುತ್ ಕೊರತೆ ಇದೆ. ಇದಕ್ಕೆಲ್ಲಾ ಮೋದಿ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ. 60 ವರ್ಷಗಳ ಕಾಂಗ್ರೆಸ್ ಆಡಳಿತವೇ ಕಾರಣ.

ಕೇಂದ್ರ ಸಚಿವಾಲಯಗಳಲ್ಲಿ ಕಲ್ಲಿದ್ದಲು, ರೈಲ್ವೆ ಅಥವಾ ವಿದ್ಯುತ್ನ ಯಾವುದೇ ಅಸಮರ್ಥತೆ ಇಲ್ಲ. ಇವೆಲ್ಲವೂ ಹಿಂದಿನ ಕಾಂಗ್ರೆಸ್ ಮಂತ್ರಿಗಳ ಮೇಲೆ ಎಂದು ಇಲಾಖೆ ಆಪಾದನೆ ಮಾಡಿದೆ.

ಆದರೆ ಇದಕ್ಕೆಲ್ಲಾ ಸರ್ಕಾರ ಪರಿಪೂರ್ಣ ಪರಿಹಾರವನ್ನು ಕಂಡುಕೊಂಡಿದೆ. ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿ ಕಲ್ಲಿದ್ದಲು ರೇಕ್ಗಳನ್ನು ಚಲಾಯಿಸುತ್ತಿದೆ ಎಂದು ಟೀಕಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ