ಜಮ್ಮುವಿನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಪ್ರತ್ಯಕ್ಷ: ಹೈ ಅಲರ್ಟ್ ಘೋಷಣೆ
ಗುರುವಾರ, 24 ಆಗಸ್ಟ್ 2017 (20:47 IST)
ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಜೈಶ್ ಇ ಮೊಹಮ್ಮದ್ ಸಂಸ್ಥಾಪಕ ಉಗ್ರ ಮೌಲಾನಾ ಮಸೂದ್ ಅಜರ್ ಪ್ರತ್ಯಕ್ಷವಾಗಿದ್ದು, ಎಲ್`ಓಸಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಐವರು ಉಗ್ರರ ಜೊತೆ ಮಸೂದ್ ಅಜರ್ ಬೀಡು ಬಿಟ್ಟಿದ್ದು, ಒಳನುಸುಳಲು ಸಂಚು ರೂಪಿಸುತ್ತಿರಬಹುದೆಂದು ಶಂಕಿಸಲಾಗಿದೆ. ಮಸೂದ್ ಅಜರ್ ಪ್ರತ್ಯಕ್ಷವಾದ ಪೋಂಚ್, ರಜೌರಿ ಮತ್ತು ಉಧಮ್ ಪುರ್ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಸೇನೆಯ ಜಮಾವಣೆ ಹೆಚ್ಚಿಸಲಾಗಿದೆ.
ಕಳೆದ ವರ್ಷ ನಡೆದ ಪಠಾಣ್ ಕೋಟ್ ಸೇನಾ ನೆಲೆ ಮೇಲಿನ ದಾಳಿಯಲ್ಲಿ ಪ್ರಮುಖ ಮಾಸ್ಟರ್ ಮೈಂಡ್ ಆಗಿರುವ ಪಾಕಿಸ್ತಾನ ಮೂಲದ ಮಸೂದ್ ಅಜರ್ ಬೇಟೆಗೆ ಭಾರತ ದೇಶ ಹುಡುಕಾಟ ನಡೆಸುತ್ತಿರುವ ಬೆನ್ನಲ್ಲೇ ಎಲ್`ಓಸಿಯಲ್ಲಿ ಪ್ರತ್ಯಕ್ಷವಾಗಿರುವ ಮತ್ತಷ್ಟು ವಿಧ್ವಂಸಕ ಕೃತ್ಯದ ಆತಂಕ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ