ಅಮ್ಮನ ಸ್ನೇಹಿತನಿಂದಲೇ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ
ಆರೋಪಿ ವೈಭವ್ ವಿಲಾಸ್ ಬೆಳಗಾವಿ ಮೂಲದವನು ಎನ್ನಲಾಗಿದೆ. ಈತ ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಆಕೆಯೊಂದಿಗೆ ಓಡಿ ಹೋಗುವ ಯೋಜನೆ ಹಾಕಿಕೊಂಡಿದ್ದ. ಆದರೆ ಅಷ್ಟರಲ್ಲಿ ಆತನಿಂದ ತಪ್ಪಿಸಿಕೊಂಡ ಯುವತಿ ಪೊಲೀಸರಿಗೆ ದೂರು ನೀಡಿದ್ದಳು.
ಸಂತ್ರಸ್ತ ಯುವತಿಯ ತಾಯಿ ಮತ್ತು ಆರೋಪಿ ಒಂದೇ ಡಾಬಾದಲ್ಲಿ ಕೆಲಸ ಮಾಡುತ್ತಿದ್ದವರು. ತಾಯಿಯೊಂದಿಗೆ ಮನೆಗೆ ಬಂದಿದ್ದ ಆರೋಪಿ ಯುವತಿಗೆ ಗುಟ್ಟಾಗಿ ತನ್ನ ಮೊಬೈಲ್ ನಂಬರ್ ನೀಡಿದ್ದ ಎನ್ನಲಾಗಿದೆ. ಬಳಿಕ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದ. ಆದರೆ ಬಳಿಕ ಆಕೆಯನ್ನು ಬೇರೆಡೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಆಗಲೇ ಯುವತಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿತ್ತು. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.