ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್
ಈ ಕುರಿತು ಟ್ವಿಟ್ಟರ್ ಮುಖ್ಯ ಕಾರ್ಯನಿರ್ವಾಹಕ ಪರಾಗ್ ಅಗರವಾಲ್ ಸಿಬ್ಬಂದಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ. ಈ ಸಭೆಯನ್ನು ಗುರುವಾರ ನಿಗದಿಪಡಿಸಲಾಗಿದೆ. ಮಸ್ಕ್ ಟ್ವಿಟ್ಟರ್ ಉದ್ಯೋಗಿಗಳೊಂದಿಗೆ ನೇರವಾಗಿ ಮಾತನಾಡುತ್ತಾರೆ.
ಟ್ವಿಟ್ಟರ್ ವಕ್ತಾರರು ಮಸ್ಕ್ ಅವರು ಈ ವಾರ ಕಂಪನಿಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.