4 ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರು ಉಡುಗೊರೆ ಕೊಟ್ಟ ನಾರಾಯಣ ಮೂರ್ತಿ

Sampriya

ಸೋಮವಾರ, 18 ಮಾರ್ಚ್ 2024 (19:16 IST)
Photo Courtesy
ಬೆಂಗಳೂರು: ಇನ್ಫೋಸಿಸ್ ಸ್ಥಾಪಕ ಎನ್‌. ಆರ್. ನಾರಾಯಣ ಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗನಿಗೆ   240 ಕೋಟಿ ಮೌಲ್ಯದ 15 ಲಕ್ಷ ಇನ್ಫೋಸಿಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
 
77 ವರ್ಷ ವಯಸ್ಸಿನ ನಾರಾಯಣ ಮೂರ್ತಿ ಕಳೆದ ಶುಕ್ರವಾರದಂದು ಮಾರುಕಟ್ಟೆಯಿಂದ ಹೊರಗಿರುವ ವಹಿವಾಟಿನಲ್ಲಿ ತನ್ನ ಮೊಮ್ಮಗನಿಗೆ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
 
ಮೊಮ್ಮಗನನ್ನು ಷೇರು ಪಾಲುದಾರ ಮಾಡಿಕೊಂಡ ನಂತರ ನಾರಾಯಣ ಮೂರ್ತಿಯವರ ಪಾಲು ಶೇ.0.36 ಆಗಿದೆ. ಕಳೆದ ನವೆಂಬರ್ ನಲ್ಲಿ ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಹಾಗೂ ಅಪರ್ಣಾ ಕೃಷ್ಣನ್ ಗಂಡು ಮಗುವಿನ ಪೋಷಕರಾದರು. ಏಕಾಗ್ರಹ ಆಗಮನದಿಂದ ತಾತ-ಅಜ್ಜಿಯಾದ ನಾರಾಯಣಮೂರ್ತಿ ಹಾಗೂ ಅವರ ಪತ್ನಿ, ಸಮಾಜಸೇವಕಿ ಸುಧಾಮೂರ್ತಿ ಅವರು ಸಂತೋಷದಿಂದ ಮೊಮ್ಮಗನನ್ನು ಬರಮಾಡಿಕೊಂಡರು.
 
ಈಗಾಗಲೇ ಇಬ್ಬರು ಮೊಮ್ಮಕ್ಕಳಿದ್ದು, ಏಕಾಗ್ರಹ ಇವರಿಗೆ ಮೂರನೇ ಮೊಮ್ಮಗು. ಮೊದಲ ಎರಡು ಹೆಣ್ಣು ಮೊಮ್ಮಕ್ಕಳು ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ನಾರಾಯಣಮೂರ್ತಿ ಅವರ ಮಕ್ಕಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ