ಒಬಿಸಿ, ಎಸ್‌‍ಸಿ, ಎಸ್‌ಟಿ ಹಾಸ್ಟೆಲ್‌ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ರಾಜಸ್ಥಾನ

ಮಂಗಳವಾರ, 28 ನವೆಂಬರ್ 2017 (15:59 IST)
ಸರಕಾರಿ ಉದ್ಯೋಗಿಗಳು ಬೆಳಿಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಎಂದು ಜೈಪುರ್ ಕಾರ್ಪೋರೇಶನ್ ಹೊರಡಿಸಿರುವ ಆದೇಶ ರಾಜ್ಯದಾದ್ಯಂತ ಭಾರಿ ಸುದ್ದಿ ಮಾಡಿದೆ.
 
ಸಿಎಂ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ (ಎಸ್ಜೆಇ) ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ವಸತಿ ನಿಲಯಗಳಲ್ಲಿ ರಾಷ್ಟ್ರ ಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
 
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಡಿಯಲ್ಲಿ ಬರುವ ಒಬಿಸಿ, ಎಸ್ಸಿ ಮತ್ತು ಎಸ್ಟಿ ಹಾಸ್ಟೆಲ್‌ಗಳಲ್ಲಿ ರಾಷ್ಟ್ರಗೀತೆಯನ್ನು ಪ್ರತಿ ದಿನ 7 ಗಂಟೆಗೆ ಹಾಡುವಂತೆ ಸರಕಾರ ಆದೇಶಿಸಿದೆ.
 
ರಾಜ್ಯದಲ್ಲಿರುವ ಎಲ್ಲಾ 789 ಸರ್ಕಾರಿ ವಸತಿ ನಿಲಯಗಳಲ್ಲಿ ಬೆಳಿಗ್ಗೆ ರಾಷ್ಟ್ರ ಗೀತೆ ಹಾಡುವಂತೆ ನಿನ್ನೆ ಸರಕಾರ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ