ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಆಸ್ಪತ್ರೆಗೆ ದಾಖಲು

ಗುರುವಾರ, 2 ಜುಲೈ 2020 (09:43 IST)
ನೇಪಾಳ : ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಠ್ಮಂಡುವಿನ ಸಾಹಿದ್ ಗಂಗಲಾಲ್ ರಾಷ್ಟ್ರೀಯ ಹೃದಯ ಕೇಂದ್ರದಲ್ಲಿ  ಪ್ರಧಾನಿ ಒಲಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಧಾನಿ ಪತ್ರಿಕಾ ಸಲಹೆಗಾರ ಸೂರ್ಯಾ ಥಾಪಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಕೂಡ ಪ್ರಧಾನಿ ಒಲಿಗೆ ಅನಾರೋಗ್ಯ ಸಮಸ್ಯೆ ಕಾಡಿದ್ದು, ತ್ರಿಭುವನ್ ಯೂನಿವರ್ಸಿಟಿ ಟೀಚಿಂಗ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ  ಚಿಕಿತ್ಸೆ ನೀಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ