ಭಾರತೀಯ ಯೋಧನ ಕತ್ತು ಸೀಳಿದ ಪಾಕ್: ಗಡಿಯಲ್ಲಿ ಉದ್ವಿಗ್ನ
ಬಿಎಸ್ ಎಫ್ ಯೋಧ ನರೇಂದ್ರ ಕುಮಾರ್ ಅವರ ಕತ್ತು ಸೀಳಿ, ಕಣ್ಣುಗಳನ್ನು ಚುಚ್ಚಿ ತೆಗೆದಿದ್ದು, 3 ಬಾರಿ ಗುಂಡು ಹಾರಿಸಿ ಪೈಶಾಚಿಕವಾಗಿ ಹಿಂಸಿಸಿ ಹತ್ಯೆ ಮಾಡಲಾಗಿದೆ.
ಜಮ್ಮು ಕಾಶ್ಮೀರದ ರಾಮಗಢ ಪ್ರದೇಶದ ಗಡಿ ಭಾಗದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದ ಸಿಟ್ಟಿಗೆದ್ದಿರುವ ಭಾರತ, ಪಾಕ್ ಸರ್ಕಾರದ ಜತೆಗೆ ಈ ವಿಷಯವನ್ನು ಪ್ರಸ್ತಾಪಿಸಲಿದೆ. ಗಡಿ ಭಾಗದಲ್ಲಿ ತಲೆಯೆತ್ತರಕ್ಕೆ ಬೆಳೆದಿದ್ದ ಹುಲ್ಲು ತೆಗೆಯಲು ಬಿಎಸ್ ಎಫ್ ಯೋಧರ ತಂಡ ಹೋಗಿದ್ದಾಗ ಪಾಕ್ ಪಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಈ ಪೈಶಾಚಿಕತೆ ಮೆರೆದಿದೆ.