ಮುಂದಿನ ತಿಂಗಳು ಆರು ದಿನ ತಿರುಪತಿಗೆ ತಿಮ್ಮಪ್ಪನ ನೋಡುವಂತಿಲ್ಲ!

ಭಾನುವಾರ, 15 ಜುಲೈ 2018 (10:27 IST)
ಹೈದರಾಬಾದ್: ಇದೇ ಮೊದಲ ಬಾರಿಗೆ ಆರು ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ಶುಚಿತ್ವ ಮಾಡಬೇಕಿರುವ ಹಿನ್ನಲೆಯಲ್ಲಿ ಈ ಕ್ರಮ ಎಂದು ದೇವಾಲಯದ ಮೂಲಗಳು ಹೇಳಿವೆ.
 

ಆಗಸ್ಟ್ 11 ರಿಂದ 16 ರವರೆಗೆ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಏಕೆ ತಿರುಪತಿ ಬೆಟ್ಟ ಕೂಡಾ ಏರುವಂತಿಲ್ಲ. ಇಂತಹ ಕ್ರಮ ಇದೇ ಮೊದಲು ಎನ್ನುವುದು ವಿಶೇಷ.

ದೇವಾಲಯಕ್ಕೆ ಭಕ್ತರ ಪ್ರವೇಶವಿದ್ದಾಗ ಶುಚಿ ಕಾರ್ಯ ಕೈಗೊಳ್ಳುವುದು ಕಷ್ಟ. ಕಾಲ್ತುಳಿತದಂತಹ ಅಪಾಯವಾಗುವ ಸಂಭವವಿದೆ. ಹಾಗಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಶುಚಿ ಕಾರ್ಯ ಕೈಗೊಳ್ಳಲಾಗುವುದು ಎಂದು ದೇವಾಲಯ ಮೂಲಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ