ವಿಜಯ್ ಮಲ್ಯರನ್ನು ಸ್ಮಾರ್ಟ್ ಅಂದಿದ್ದು ವಿವಾದವಾಗುತ್ತಿದ್ದ ಉಲ್ಟಾ ಹೊಡೆದ ಕೇಂದ್ರ ಸಚಿವ
ವಿಜಯ್ ಮಲ್ಯ ಸ್ಮಾರ್ಟ್. ಅವರಂತೆ ಬ್ಯಾಂಕ್ ಗಳಿಂದ ಸಾಲ ಪಡೆದು ವ್ಯವಹಾರ ಮಾಡುವುದು ಹೇಗೆ ಎಂದು ಕಲಿಯಿರಿ ಎಂದು ಸಚಿವರು ಬುಡಕಟ್ಟು ಜನಾಂಗದವರಿಗೆ ಸಲಹೆ ನೀಡಿದ್ದರು.
ಇದು ಟೀಕೆಗೆ ಗುರಿಯಾಗುತ್ತಿದ್ದಂತೆ ಉಲ್ಟಾ ಹೊಡೆದಿರುವ ಸಚಿವ ಓರಾಮ್ ನಾನು ಯಾರದೋ ಹೆಸರು ಹೇಳುವ ಬದಲು ತಪ್ಪಾಗಿ ವಿಜಯ್ ಮಲ್ಯ ಹೆಸರು ಪ್ರಸ್ತಾಪಿಸಿದ್ದೆ. ಅದು ಬಾಯ್ತಪ್ಪಿ ಹಾಗೆ ಹೇಳಿದೆ ಎಂದು ಸಮಜಾಯಿಷಿ ನೀಡಿದ್ದಾರೆ.