ಗೋಹತ್ಯೆ ನಿಷೇಧ ಅಧಿಸೂಚನೆ ವಾಪಸ್: ಮೋದಿ ಸರ್ಕಾರ ಯೂ-ಟರ್ನ್
ಶನಿವಾರ, 2 ಡಿಸೆಂಬರ್ 2017 (21:10 IST)
ಗುಜರಾತ್ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ನೇತೃತ್ವದ ಸರಕಾರ ದೇಶಾದ್ಯಂತ ಕೋಲಾಹಲ ಮೂಡಿಸಿದ್ದ ಗೋಹತ್ಯೆ ನಿಷೇಧ ಅಧಿಸೂಚನೆಯನ್ನು ವಾಪಸ್ ಪಡೆಯಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಗೋಹತ್ಯೆ ನಿಷೇಧ ವಾಪಸ್‌ನಿಂದಾಗಿ ಗೋವುಗಳ ಖರೀದಿ, ಹತ್ಯೆ ನಿಯಮಗಳಲ್ಲಿ ಸಡಿಲಿಕೆಯಾಗಲಿದೆ. ಇದರಿಂದ ಗೋರಕ್ಷಕರ ಅರ್ಭಟಕ್ಕೆ ಕಡಿವಾಣ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ಮುಂದೆ ಗೋವುಗಳ ಹತ್ಯೆ ಮಾಡಿದಲ್ಲಿ ಕಾನೂನು ಬಾಹಿರ ಕೃತ್ಯವಾಗುವುದಿಲ್ಲ. ಗೋಹತ್ಯೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಕೇಂದ್ರದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಆದೇಶದ ಮೂಲಕ ಆರ್‌ಎಸ್ಎಸ್ ಅಜೆಂಡಾಗಳನ್ನು ಜಾರಿಗೊಳಿಸುತ್ತಿದೆ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.