ಐಎನ್‌ಡಿಐಎ ಒಕ್ಕೂಟಕ್ಕೆ ಈಗ ಮತ್ತೊಂದು ಸಂಕಷ್ಟ ..!

geetha

ಭಾನುವಾರ, 28 ಜನವರಿ 2024 (18:00 IST)
ಉತ್ತರಪ್ರದೇಶ : ಈಗಾಗಲೇ ಬಿಹಾರದ ನಿತೀಶ್‌ ಕುಮಾರ್‌ ಹಾಗೂ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಐಎನ್‌ಡಿಐಎ ಒಕ್ಕೂಟದಿಂದ ಹಿಂದೆ ಸರಿದಿದ್ದು, 80 ಲೋಕಸಭಾ ಕ್ಷೇತ್ರಗಳಿರುವ ಉತ್ತರಪ್ರದೇಶದಲ್ಲಿ ಈ ಬೆಳವಣಿಗೆ ಕಾಂಗ್ರೆಸ್‌ ಗೆ ಸಂದಿಗ್ದ ತಂದಿರಿಸಿದೆ.  ಐಎನ್‌ಡಿಐಎ ಒಕ್ಕೂಟಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ   ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 11 ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅಖಿಲೇಶ್‌ ಯಾದವ್‌ ಹೇಳಿದ್ದಾರೆ. ಜೊತೆಗೆ, 62 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಸ್ಪರ್ಧಿಸಲಿದೆ. ಈ ಹೊಂದಾಣಿಕೆಗೆ ಒಪ್ಪದಿದ್ದರೆ ಸ್ವತಂತ್ರವಾಗಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಎಸ್‌ಪಿ ಸಿದ್ದವಾಗಿದೆ ಎಂದು ಅಖಿಲೇಶ್‌ ಗುಡುಗಿದ್ದಾರೆ. 

ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದಗಳ ಸಮೀಕರಣ ಅನ್ವಯಿಸಿ ನಾವು ಇತಿಹಾಸ ಬದಲಿಸಲಿದ್ದೇವೆ ಎಂದು ನುಡಿದಿರುವ ಅಖಿಲೇಶ್‌ ಯಾದವ್‌, ಆರ್‌ಎಲ್‌ಡಿ ಪಕ್ಷಕ್ಕೆ ಏಳು ಸ್ಥಾನ ನೀಡಲಿದ್ದೇವೆ. ಕಾಂಗ್ರೆಸ್‌ ಗೆ 11 ಸ್ಥಾನ ನೀಡುತ್ತೇವೆ. ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸಲಿದ್ದೇವೆ ಎಂದು ನುಡಿದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ