ಚಲಿಸುವ ರೈಲಿಗೆ ನಾಯಿ ಹತ್ತಿಸಲು ಹೋದ ಮಾಲಿಕ, ಆಗಿದ್ದೇನು: ಶಾಕಿಂಗ್ ವಿಡಿಯೋಗೆ ಜನರಿಂದ ಛೀಮಾರಿ

Krishnaveni K

ಬುಧವಾರ, 2 ಏಪ್ರಿಲ್ 2025 (13:02 IST)
Photo Credit: X
ಬೆಂಗಳೂರು: ಚಲಿಸುವ ರೈಲಿಗೆ ನಾಯಿಯನ್ನು ಹತ್ತಿಸಲು ಹೋದ ಮಾಲಿಕನ ಬೇಜವಾಬ್ಧಾರಿಯುತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದಕ್ಕೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

ಆಗಷ್ಟೇ ಹೊರಟಿದ್ದ ರೈಲಿಗೆ ಸಾಕು ನಾಯಿಯನ್ನು ಮಾಲಿಕ ಹತ್ತಿಸಲು ಹೋಗಿದ್ದ. ಕೈಯಲ್ಲಿ ಸಂಕೋಲೆ ಹಿಡಿದು ನಾಯಿಯನ್ನು ಹತ್ತಿಸಲು ಹೊರಟರೆ ರೈಲು ಚಲಿಸುತ್ತಿದ್ದ ಕಾರಣ ನಾಯಿ ಭಯಗೊಂಡು ಹತ್ತಲೇ ಇಲ್ಲ.

ಈ ಗಡಿಬಿಡಿಯಲ್ಲಿ ನಾಯಿ ರೈಲು ಮತ್ತು ಫ್ಲ್ಯಾಟ್ ಫಾರಂ ನಡುವೆ ಸಿಲುಕಿ ಕೆಳಗೆ ಬಿದ್ದಿದೆ. ಇದನ್ನು ನೋಡಿ ಸಾಕಷ್ಟು ಜನ ಆತಂಕದಿಂದ ನಾಯಿಗೆ ಏನಾಯ್ತೋ ಎಂದು ನೋಡುತ್ತಾ ನಿಂತಿದ್ದಾರೆ. ಮಾಲಿಕನೂ ಕೂಲ್ ಆಗಿ ನಾಯಿಯನ್ನು ಹುಡುಕಿದ್ದಾನೆ.

ಘಟನೆಯಲ್ಲಿ ಪವಾಡಸದೃಶವಾಗಿ ನಾಯಿ ಬದುಕುಳಿದಿದೆ ಎನ್ನಲಾಗಿದೆ. ಆದರೆ ಮೂಕಪ್ರಾಣಿಯ ಜೊತೆಗೆ ಮಾಲಿಕನ ಬೇಜವಾಬ್ಧಾರಿಯುತ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

???? WATCH | A pet dog fell into the gap between the platform and tracks as its owner tried to board a moving Rajdhani Express.

The viral video has sparked outrage, with activists demanding legal action for negligence.

Authorities yet to confirm details. pic.twitter.com/axWD9zYI6p

— Times in Assam (@TimesinAssam) April 2, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ