ನವದೆಹಲಿ: ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿರುವ ಮಾತೃವಂದನಾ ಯೋಜನೆ ಗರ್ಭಿಣಿ ಮಹಿಳೆಯರಿಗೆ ಪ್ರಸವ ಪೂರ್ವ ಮತ್ತು ನಂತರ ಆರ್ಥಿಕವಾಗಿ ಬಲ ನೀಡುವ ಸೌಲಭ್ಯವಾಗಿದೆ. ಇದನ್ನು ಪಡೆಯುವುದು ಹೇಗೆ ಇಲ್ಲಿ ನೋಡಿ.
ಮಹಿಳಾ ಮತ್ತು ಮಕ್ಕಲ ಅಭಿವೃದ್ಧಿ ಇಲಾಖೆಯು ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯನ್ನು ಹೊರತಂದಿದೆ. ಇದರಲ್ಲಿ ಗರ್ಭಿಣಿಯರು ಪ್ರಸವ ಪೂರ್ವ ಮತ್ತು ನಂತರ ಒಟ್ಟು 11 ಸಾವಿರ ರೂ. ಪ್ರೋತ್ಸಾಹ ಧನ ಪಡೆಯಬಹುದಾಗಿದೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿ ನೋಡಿ.
ಮಾತೃಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಮಾತೃವಂದನಾ ಯೋಜನೆಗೆ ಅರ್ಜಿ ಸಲ್ಲಿಸಲು ತಾಯಿ ಕಾರ್ಡ್ ಮತ್ತು ಮಗುವಿನ ಲಸಿಕೆ ಕಾರ್ಡ್, ಆಧಾರ್ ಕಾರ್ಡ್, ಫಲಾನುಭವಿಯ ಬ್ಯಾಂಕ್ ಖಾತೆ ವಿವರ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನರೇಗಾ ಕಾರ್ಡ್, ಇ-ಶ್ರಮ್ ಕಾರ್ಡ್, ಆಯುಷ್ಮಾನ್ ಕಾರ್ಡ್ (ಯಾವುದಾದರೂ ಒಂದು) ಹೊಂದಿರಬೇಕು.
ಮಹಿಳೆಯರ ಮೊದಲ ಪ್ರಸವದ ಮೊದಲು ನಂತರ ಆರೈಕೆಗಾಗಿ ಈ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಮೊದಲ ಮಗುವಿಗೆ ಎರಡು ಕಂತುಗಳಲ್ಲಿ 5,000 ರೂ. ಮತ್ತು ಎರಡನೆಯ ಮಗುವಿಗೆ 6000 ರೂ. ನೀಡಲಾಗುವುದು. ಸರ್ಕಾರಿ ನೌಕರರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
ಎಲ್ಲಿ ಅರ್ಜಿ ಸಲ್ಲಿಸಬೇಕು
ಅರ್ಜಿ ಸಲ್ಲಿಸುವ ವಿವರಕ್ಕಾಗಿ ನಿಮ್ಮ ಹತ್ತಿರದ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಅಥವಾ ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಪಡೆದು ಅರ್ಜಿ ಸಲ್ಲಿಸಬಹುದು.