ನವದೆಹಲಿ: ನಾನು ಮುಸ್ಲಿಮರ ವಿರೋಧಿಯಲ್ಲ, ಮುಸ್ಲಿಮರಲ್ಲೂ ನನಗೆ ಹಲವು ಸ್ನೇಹಿತರಿದ್ದಾರೆ. ನನ್ನ ಬಹುಮಕ್ಕಳನ್ನು ಹೊಂದಿರುವವರು ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಯಿತು ಎಂದು ಪ್ರಧಾನಿ ಮೋದಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸುವಾಗ ಮೋದಿ, ಕಾಂಗ್ರೆಸ್ಸಿಗರು ನಿಮ್ಮ ಆಸ್ತಿಯನ್ನು ಕಿತ್ತು ಅಧಿಕ ಮಕ್ಕಳನ್ನು ಹೊಂದಿರುವವರಿಗೆ ಹಂಚುತ್ತಾರೆ ಎಂದಿದ್ದರು. ಅವರ ಈ ಹೇಳಿಕೆ ಮುಸ್ಲಿಮರನ್ನು ಉಲ್ಲೇಖಿಸಿ ನೀಡಲಾಗಿದೆ ಎಂದು ಟೀಕಿಸಲಾಗಿತ್ತು. ಈ ಬಗ್ಗೆ ಇದೀಗ ಮೋದಿ ಸಂದರ್ಶನವೊಂದರಲ್ಲಿ ಸಮರ್ಥನೆ ನೀಡಿದ್ದಾರೆ.
ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಯಿತು. ನಾನು ಬಹು ಮಕ್ಕಳನ್ನು ಹೊಂದಿರುವವರು ಎಂದು ಕೇವಲ ಮುಸ್ಲಿಮರನ್ನು ಉದ್ದೇಶಿಸಿ ಹೇಳಲಿಲ್ಲ. ಬೇರೆ ಧರ್ಮದಲ್ಲೂ ಹೆಚ್ಚು ಮಕ್ಕಳನ್ನು ಹೊಂದಿರುವವರು ಇರುತ್ತಾರೆ. ಬಡತನ ಇರುವವರು ತಮ್ಮ ಸ್ಥಿತಿ ಗತಿ ನೋಡಿಕೊಂಡು ಅದಕ್ಕೆ ತಕ್ಕಷ್ಟು ಮಕ್ಕಳನ್ನು ಹೆರಬೇಕು ಎಂಬ ಅರ್ಥದಲ್ಲಿ ಹೇಳಿದ್ದೆ.
ನಾನು ಮುಸ್ಲಿಮರ ವಿರೋಧಿಯಲ್ಲ. ನಾನು ಚಿಕ್ಕವನಿದ್ದಾಗ ಮುಸ್ಲಿಮರ ಕುಟುಂಬದಿಂದ ಹಬ್ಬದೂಟ ಬರುತ್ತಿತ್ತು. ನನಗೂ ಅನೇಕ ಮುಸ್ಲಿಂ ಸ್ನೇಹಿತರಿದ್ದಾರೆ. ನಾನು ಹಿಂದೂ-ಮುಸ್ಲಿಂ ಎಂದು ಬೇಧ ಮಾಡುತ್ತಿದ್ದರೆ ಇಷ್ಟು ವರ್ಷ ಸಾರ್ವಜನಿಕ ಜೀವದಲ್ಲಿ ಇರಲು ಸಾಧ‍್ಯವಾಗುತ್ತಿರಲಿಲ್ಲ. ಗೋದ್ರಾ ಗಲಭೆ ನಂತರ ಮುಸ್ಲಿಮರಿಗೆ ನನ್ನ ವಿರುದ್ಧ ಭಾವನೆ ಬರುವಂತೆ ಮಾಡಲಾಯಿತು ಎಂದಿದ್ದಾರೆ.