ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲ್ಲ: ಪ್ರಧಾನಿ ಮೋದಿ

Krishnaveni K

ಬುಧವಾರ, 1 ಮೇ 2024 (12:39 IST)
ತೆಲಂಗಾಣ:: ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ.

ತೆಲಂಗಾಣದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ ಕಾಂಗ್ರೆಸ್ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ತಾನು ಬದುಕಿರುವವರೆಗೂ ಮುಸ್ಲಿಮರನ್ನು ಧರ್ಮದ ಆಧಾರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.

ಕಾಂಗ್ರೆಸ್ ಮತ ಬ್ಯಾಂಕ್ ಗಾಗಿ ಸಂವಿಧಾನಕ್ಕೇ ಅವಮಾನ ಮಾಡಲು ಹೊರಟಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಹಿರಿಯರಿಂದ ಬಂದ ಆಸ್ತಿಗೆ ತೆರಿಗೆ ಹಾಕಲಿದೆ ಎಂದು ಮೋದಿ ಎಚ್ಚರಿಸಿದ್ದಾರೆ.

‘ಸಂಸತ್ತು ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿದ ಕುಖ್ಯಾತಿ ಕಾಂಗ್ರೆಸ್ಸಿಗರದ್ದು. ಅವರೀಗ ಚುನಾವಣಾ ಆಯೋಗವನ್ನೇ ಪ್ರಶ್ನಿಸಿದೆ. ಇವಿಎಂ ನ್ನು ಪ್ರಶ್ನೆ ಮಾಡುತ್ತಾರೆ, ಮತ್ತೆ ಈಗ ತಮ್ಮ ಮತ ಬ್ಯಾಂಕ್ ಗಾಗಿ ಸಂವಿಧಾನವನ್ನೇ ಅವಮಾನ ಮಾಡುತ್ತಿದ್ದಾರೆ. ನಾನು ಜೀವಿತವಾಗಿರುವವರೆಗೂ ಒಬಿಸಿ, ಎಸ್ ಸಿ, ಎಸ್ ಟಿಯವರಿಗೆ ಮೀಸಲಾಗಿರುವ ಮೀಸಲಾತಿಯನ್ನು ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ನೀಡಲು ಅವಕಾಶ ಕೊಡಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ