ನವದೆಹಲಿ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ರಾಮಮಂದಿರದ ಮೇಲೆ ಬುಲ್ಡೋಜರ್ ಚಲಾಯಿಸುತ್ತಾರೆ ಎಂದ ಪ್ರಧಾನಿ ಮೋದಿ ಬುಲ್ಡೋಜರ್ ಎಲ್ಲಿ ಓಡಿಸಬೇಕು ಎಂದು ಯೋಗಿ ಆದಿತ್ಯನಾಥ್ ರಿಂದ ಟ್ಯೂಷನ್ ತೆಗೆದುಕೊಳ್ಳಬೇಕು ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ್ ಲಲ್ಲಾ ಮತ್ತೆ ಟೆಂಟ್ ನಲ್ಲಿರಬೇಕಾಗುತ್ತದೆ. ರಾಮಮಂದಿರದ ಮೇಲೆ ಬುಲ್ಡೋಜರ್ ಓಡಿಸುತ್ತಾರೆ. ಬುಲ್ಡೋಜರ್ ಎಲ್ಲಿ ಚಲಾಯಿಸಬೇಕು ಎಂದು ಕಲಿಯಲು ಯೋಗಿ ಆದಿತ್ಯನಾಥ್ ರಿಂದ ಟ್ಯೂಷನ್ ತೆಗೆದುಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಅಕ್ರಮವೆಸಗಿದವರ ಕಟ್ಟಡಗಳ ಮೇಲೆ ನಿರ್ದ್ಯಾಕ್ಷಿಣ್ಯವಾಗಿ ಬುಲ್ಡೋಜರ್ ನುಗ್ಗಿಸುತ್ತಾರೆ. ಇದಕ್ಕಾಗಿಯೇ ಅವರನ್ನು ಬುಲ್ಡೋಜರ್ ಬಾಬ ಎಂದೂ ಹೇಳುವುದಿದೆ. ಬಾರಾಬಂಕಿಯಲ್ಲಿ ಮಾತನಾಡಿದ ಮೋದಿ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಅಸ್ಥಿರತೆ ಹುಟ್ಟುಹಾಕುವ ಸಲುವಾಗಿಯೇ ಇಂಡಿಯಾ ಒಕ್ಕೂಟ ತರಲಾಗಿದೆ. ಆದರೆ ನಮ್ಮ ಪಕ್ಷ ಹ್ಯಾಟ್ರಿಕ್ ಗೆಲುವು ಕಾಣಲಿದೆ. ಅಖಿಲೇಶ್ ಯಾದವ್ ಗೆ ಮಮತಾ ರೂಪದಲ್ಲಿ ಹೊಸ ಅತ್ತೆ ಸಿಕ್ಕಿದ್ದಾರೆ ಎಂದು ಈ ಅತ್ತೆ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ಘೋಷಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.