ನಮಗೂ ಮೋದಿಯಂತಹ ನಾಯಕ ಬೇಕಿತ್ತು ಎಂದ ಪಾಕಿಸ್ತಾನ ಉದ್ಯಮಿ

Krishnaveni K

ಬುಧವಾರ, 15 ಮೇ 2024 (14:53 IST)
ಇಸ್ಲಾಮಾಬಾದ್: ನಮಗೂ ಮೋದಿಯಂತಹ ಸ್ಟ್ರಿಕ್ ನಾಯಕ ಬೇಕಿತ್ತು ಎಂದು ಪಾಕಿಸ್ತಾನಿ ಮೂಲದ ಉದ್ಯಮಿ ಸಾಜಿದ್ ತರಾರ್ ಹೇಳಿಕೊಂಡಿದ್ದಾರೆ. ಮೋದಿಯಂತಹ ಪ್ರಭಾವಿ ಮತ್ತು ನೈಸರ್ಗಿಕವಾಗಿ ನಾಯಕತ್ವ ಗುಣವಿರುವ ಪ್ರಧಾನಿ ಬೇಕಿತ್ತು ಎಂದಿದ್ದಾರೆ.

ಮೋದಿ ಜೀ ಪ್ರಭಾವಿ ಮತ್ತು ನಾಯಕತ್ವ ಗುಣವಿರುವ ವ್ಯಕ್ತಿ. ಅವರು ಕೇವಲ ಭಾರತಕ್ಕೆ ಮಾತ್ರವಲ್ಲ, ತಮ್ಮ ಸುತ್ತಮುತ್ತಲ ದೇಶಗಳಿಗೂ ಒಳಿತು ಮಾಡಿದರು. ಅಹಿತಕರ ಸನ್ನಿವಶೇದಲ್ಲೂ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದರು. ಮೋದಿ ಜಿ ಸದ್ಯದಲ್ಲೇ ಪಾಕಿಸ್ತಾನ ಜೊತೆ ಮಾತುಕತೆ ಮತ್ತು ವಾಣಿಜ್ಯ ಸಂಬಂಧ ವೃದ್ಧಿಸುವ ನಿರೀಕ್ಷೆಯಿದೆ ಎಂದಿದ್ದಾರೆ.

ಪಾಕಿಸ್ತಾನ ಶಾಂತಿಯುತವಾಗಿರುವುದು ಭಾರತಕ್ಕೂ ಒಳಿತು. ಮೋದಿಜೀ ಭಾರತದ ಮುಂದಿನ ಪ್ರಧಾನಿ ಎಂದು ಎಲ್ಲೆಡೆ ಹೇಳಲಾಗುತ್ತಿದೆ ಎಂದು ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಪಾಕಿಸ್ತಾನದಲ್ಲಿ ಈಗ ಹಣದುಬ್ಬರ ತಾಂಡವವಾಡುತ್ತಿದೆ. ಅಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ವಿಶ್ವ ಬ್ಯಾಂಕ್ ಕೂಡಾ ಸಾಲ ನೀಡಲು ಹಿಂದೇಟು ಹಾಕುತ್ತಿದೆ. ಹೀಗಿರುವಾಗ ಪಾಕ್ ಪ್ರಧಾನಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ 2000 ಕೋಟಿ ಅನುದಾನ ಘೋಷಿಸಿದ್ದಾರೆ. ಇದಕ್ಕೆಲ್ಲಾ ಹಣ ಎಲ್ಲಿಂದ ತರುತ್ತೀರಿ? ಪಾಕಿಸ್ತಾನದಲ್ಲಿ ಆರ್ಥಿಕ ವ್ಯವಸ್ಥೆ ಸುಧಾರಿಸಲು ತಳಮಟ್ಟದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂದು ಚಿಂತನೆ ಮಾಡುತ್ತಿಲ್ಲ. ಎಲ್ಲವೂ ಭಯೋತ್ಪಾದನೆಯ ಕಪಿಮುಷ್ಠಿಯಲ್ಲಿದೆ. ಪಿಒಕೆಯಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಇದೆಲ್ಲವನ್ನೂ ನಿಯಂತ್ರಿಸುವಂತಹ ಕಠಿಣ, ದಕ್ಷ ನಾಯಕನ ಅಗತ್ಯ ನಮಗಿದೆ ಎಂದು ತರಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ