ಅಗಸ್ಟಾ ವೆಸ್ಟ್ ಲ್ಯಾಂಡ್ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಬಾಯಿಂದ ಹೊರ ಬೀಳಲಿದೆ ಭಯಾನಕ ಸತ್ಯಗಳು ಎಂದ ಪ್ರಧಾನಿ ಮೋದಿ

ಗುರುವಾರ, 6 ಡಿಸೆಂಬರ್ 2018 (09:25 IST)
ನವದೆಹಲಿ: ದುಬೈನಿಂದ ಗಡೀಪಾರಾದ ಭಾರತ ವಾಂಟೆಡ್ ಲಿಸ್ಟ್ ನಲ್ಲಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಬಾಯಿಂದ ತಾನು ಯಾವ ರಾಜಕಾರಣಿಗಳಿಗಾಗಿ ಸೇವೆ ಮಾಡಿದ್ದೆ ಎಂಬ ಸತ್ಯ ಹೊರಬೀಳಲಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.


ಯುಪಿಎ ಅವಧಿಯಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಕಾಪ್ಟರ್ ಖರೀದಿ ಒಪ್ಪಂದ ಪ್ರಕರಣ ಭಾರೀ ಕೋಲಹಾಲ ಸೃಷ್ಟಿಸಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮೈಕಲ್ ನನ್ನು ದುಬೈ ಕೋರ್ಟ್ ಭಾರತಕ್ಕೆ ಗಡೀಪಾರು ಮಾಡಿದ್ದು, ಇಲ್ಲಿ ಆತನ ವಿಚಾರಣೆ ನಡೆಸಲಾಗುವುದು.

 ಈ ಸಂದರ್ಭದಲ್ಲಿ ಆತನ ಬಾಯಿಂದ ಕೆಲವು ರಾಜಕಾರಣಿಗಳ ಹೆಸರು ಹೊರಬೀಳುವುದು ಸತ್ಯ. ಆ ವಿವಿಐಪಿಗಳ ಹೆಸರು ಕೇಳಲು ಕಾದಿರಿ ಎಂದು ಕಾಂಗ್ರೆಸ್ ವಿರುದ್ಧ ರಾಜಸ್ಥಾನ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ