ಚಪ್ಪಲಿಯಿಂದಾಗಿ ಕೊಲೆಗಾರ ಪೊಲೀಸರ ಕೈಗೆ ಸಿಕ್ಕಿಬಿದ್ದ!

ಶುಕ್ರವಾರ, 5 ನವೆಂಬರ್ 2021 (10:45 IST)
ಪುಣೆ: ಕೊಲೆಗಾರ ಬಿಟ್ಟು ಹೋಗಿದ್ದ ಚಪ್ಪಲಿಯಿಂದಾಗಿ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
 

ಆರೋಪಿ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಯ ಗಂಡನನ್ನು ಕೊಲೆ ಮಾಡಿದ್ದ. ಪೊಲೀಸರು ನಾನಾ ರೀತಿಯಲ್ಲಿ ತನಿಖೆ ನಡೆಸಿದರೂ ಕೊಲೆಗಾರನ ಸುಳಿವು ಸಿಕ್ಕಿರಲಿಲ್ಲ.

ಆರೋಪಿ ಮಹಿಳೆಯ ಮನೆಯ ಹೊರಾವರಣದಲ್ಲಿ ಚಪ್ಪಲಿ ಮರೆತು ಹೋಗಿದ್ದ. ಈ ಚಪ್ಪಲಿಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ತನಿಖೆ ನಡೆಸಿದಾಗ ಇಬ್ಬರೂ ಸಂಚು ಮಾಡಿಯೇ ಈ ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ