ನಮಗೂ ಒಬ್ಬ ಗೆಳೆಯ ಬೇಕು ಎನ್ನುತ್ತಿರುವ ರಾಹುಲ್ ಗಾಂಧಿ ಆಂಡ್ ಪಾರ್ಟಿ

Krishnaveni K

ಬುಧವಾರ, 5 ಜೂನ್ 2024 (09:50 IST)
ನವದೆಹಲಿ: ಎನ್ ಡಿಎ ಜೊತೆಗೆ ಕಾಂಗ್ರೆಸ್ ಕೂಡಾ ತನ್ನ ಮಿತ್ರ ಪಕ್ಷಗಳ ಸಹಾಯದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆಗಳ ಬಗ್ಗೆ ಇಂದು ಸಭೆ ನಡೆಸಿ ಚರ್ಚೆ ಮಾಡಲಿದೆ. ಇದಕ್ಕಾಗಿ ಕಾಂಗ್ರೆಸ್ ಗೆ ಬಿಜೆಪಿಗಿಂತ ಹೆಚ್ಚು ಸಂಖ್ಯೆಯಲ್ಲಿ ಅನ್ಯಪಕ್ಷಗಳ ಸಹಾಯ ಬೇಕಾಗಿದೆ.

ಇಂಡಿಯಾ ಒಕ್ಕೂಟ ಒಟ್ಟು 233 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಇದೀಗ ಬಹುಮತ ಸಾಧಿಸಲು ಇಂಡಿಯಾ ಒಕ್ಕೂಟಕ್ಕೆ 40 ಸ್ಥಾನಗಳ ಕೊರತೆಯಿದೆ. ಇದಕ್ಕಾಗಿ ಈಗ ಎನ್ ಡಿಎ ಜೊತೆಗಿರುವ ಪಕ್ಷಗಳನ್ನು ಸೆಳೆಯಲು ಪ್ರಯತ್ನ ನಡೆಸಿದೆ.

ನಿತೀಶ್ ಕುಮಾರ್ ಈ ಮೊದಲು ಇಂಡಿಯಾ ಒಕ್ಕೂಟದಲ್ಲಿದ್ದರು. ಆದರೆ ಸೀಟು ಹಂಚಿಕೆ ಅಸಮಾಧಾನದಿಂದಾಗಿ ಇಂಡಿಯಾ ಬಿಟ್ಟು ಎನ್ ಡಿಎ ಸೇರಿಕೊಂಡರು. ಇತ್ತ ಚಂದ್ರ ಬಾಬು ನಾಯ್ಡು ಅವರನ್ನು ಸಂಪರ್ಕಿಸಲೂ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.

ಒಂದು ವೇಳೆ ಈ ಎರಡೂ ಪಕ್ಷಗಳು ಬೆಂಬಲ ಸೂಚಿಸಿದರೂ ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ. ಇದಕ್ಕಾಗಿ ಇತರೆ ಸದಸ್ಯರ ನೆರವು ಪಡೆಯಬೇಕಾಗುತ್ತದೆ.  ಹೀಗಾಗಿ ಕಾಂಗ್ರೆಸ್ ಗೆ ಸರ್ಕಾರ ರಚನೆ ಕಷ್ಟವಾದರೂ ಅಸಾಧ್ಯವೇನೂ ಅಲ್ಲ ಎನ್ನಬಹುದು.  ಈ ಬಗ್ಗೆ ಇಂದು ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ