ಡ್ರೋಣ್ ದೀದಿ ಸುನೀತಾ ದೇವಿಯವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ನವದೆಹಲಿ : ಉತ್ತರ ಪ್ರದೇಶದ ಸೀತಾ ಪುರ ಮೂಲದ ಸುನಿತಾ ದೇವಿಯವರು ದ್ರೋಣ್ ಬಳಸಿ ತಮ್ಮ ಹಳ್ಳಿ ಯಲ್ಲಿ ಮಾಡಿದ ಕ್ರಾಂತಿಕಾರಕ ಬದಲಾವಣೆಗಳಿಂದಾಗಿ ಮನೆಮಾತಾಗಿದ್ದರು. ಕೃಷಿ ಕೆಲಸಗಳಿಗೆ ಡ್ರೋಣ್ ಬಳಸಿಕೊಳ್ಳುವ ಮೂಲಕ ಸುನಿತಾ ದೇವಿ ದೇಶಾದ್ಯಂತ ಪ್ರಸಿದ್ದವಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದ ವೇಳೆ ಡ್ರೋಣ್ ದೀದಿ ಸುನೀತಾ ದೇವಿಯವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ನಮ್ಮ ಹಳ್ಳಿಯ ಮಹಿಳೆಯರು ಮುಂದೊಂದು ದಿನ ಡ್ರೋಣ್ ಹಾರಿಸಲಿದ್ದಾರೆಂದರೆ ಯಾರೂ ನಂಬುತ್ತಿರಲಿಲ್ಲ. ಆದರೆ ಇಂದು ಆ ಮಾತು ನಿಜವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈಗ ಡ್ರೋಣ್ ದೀದಿ ಯೋಜನೆಯನ್ನು ಕಳೆದ ವರ್ಷದಿಂದ ಪ್ರಾರಂಭಿಸಿದೆ. ದೇಶಾದ್ಯಂತ 15 ಸಾವಿರಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋಣ್ ನೀಡಲಿರುವ ಸರ್ಕಾರವು ಅದನ್ನು ಕೃಷಿ ಕಾರ್ಯಗಳಿಗೆ ಬಾಡಿಗೆ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ಸಲಹೆ ನೀಡಿದೆ.