ಮೆಟ್ರೋ ರೈಲಿನಲ್ಲಿ ಟಿಕೆಟ್ ಖರೀದಿಸಿ ಪ್ರಯಾಣಿಸಿದ ಪ್ರಧಾನಿ

ಸೋಮವಾರ, 7 ಮಾರ್ಚ್ 2022 (09:56 IST)
ಮುಂಬೈ  : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪುಣೆ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದರು.

ಸ್ವಲ್ಪ ಸಮಯದ ಬಳಿಕ ಯಂಗ್ ಫ್ರೆಂಡ್ಸ್ ಜೊತೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಒಟ್ಟು 32.2 ಕಿಲೋಮೀಟರ್ ಪುಣೆ ಮೆಟ್ರೋ ರೈಲು ಯೋಜನೆಯ 12 ಕಿ.ಮೀ. ವ್ಯಾಪ್ತಿಯನ್ನು ಉದ್ಘಾಟಿಸಿದ ಮೋದಿ ಅವರು ನಂತರ ಟಿಕೆಟ್ ಖರೀದಿಸಿ ಮಕ್ಕಳೊಂದಿಗೆ ಗಾರ್ವೇರ್ ಮೆಟ್ರೋ ನಿಲ್ದಾಣದಿಂದ ಆನಂದನಗರ ನಿಲ್ದಾಣದವರೆಗೆ ಪ್ರಯಾಣಿಸಿದರು.

ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುಣೆಯ ಜನತೆ ಅನುಕೂಲಕರವಾಗಿ ಮತ್ತು ಆರಾಮದಾಯಕವಾಗಿ ಪ್ರಯಾಣಿಸಬಹುದು ಎಂದು ಖಾತ್ರಿಪಡಿಸಿರುವ ಮೋದಿ ಅವರು,

ಟ್ವಿಟ್ಟರ್ನಲ್ಲಿ ಮಕ್ಕಳ ಜೊತೆ ಕುಳಿತಿರುವ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ಕ್ಯಾಪ್ಷನ್ನಲ್ಲಿ ಪುಣೆ ಮೆಟ್ರೋದಲ್ಲಿ ಯಂಗ್ ಫ್ರೆಂಡ್ಸ್ ಜೊತೆಗೆ ಪ್ರಯಾಣ ಎಂದು ಬರೆದುಕೊಂಡಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ