ರಾಜೀವ್ ಗಾಂಧಿ ಮಕ್ಕಳ ಪೈಕಿ ರಾಹುಲ್ ಮತ್ತು ಪ್ರಿಯಾಂಕ ನಡುವೆ ಯಾರು ದೊಡ್ಡವರು ಎಂಬ ಬಗ್ಗೆ ಅನೇಕರಲ್ಲಿ ಅನುಮಾನಗಳಿವೆ. ಪ್ರಿಯಾಂಕ ಇಂದು ಹಂಚಿಕೊಂಡಿರುವ ವಿಡಿಯೋದಲ್ಲಿ ಎಲ್ಲರ ಅನುಮಾನಕ್ಕೆ ಸ್ಪಷ್ಟವಾದ ಉತ್ತರ ಸಿಗುತ್ತದೆ. ಇಬ್ಬರ ಅನೇಕ ಸುಂದರ ಕ್ಷಣಗಳ ವಿಡಿಯೋ ಹಂಚಿಕೊಂಡ ಪ್ರಿಯಾಂಕ ರಕ್ಷಾ ಬಂಧನಕ್ಕೆ ರಾಹುಲ್ ಗೆ ಶುಭ ಕೋರಿದ್ದಾರೆ.ಈ ವಿಡಿಯೋದಲ್ಲಿ ರಾಹುಲ್ ಮತ್ತು ಪ್ರಿಯಾಂಕ ತಮ್ಮ ಬಾಲ್ಯದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.