ವಾಷಿಂಗ್ಟನ್ : ದಕ್ಷಿಣ ಏಷ್ಯಾ ಹಾಗೂ ಇಂಡೋ-ಕೆರಿಬಿಯನ್ ಸಮುದಾಯಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ದೊಡ್ಡ ನಗರವಾದ ನ್ಯೂಯಾರ್ಕ್ನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹಿಂದೂ, ಸಿಖ್, ಜೈನರು ಹಾಗೂ ಬೌದ್ಧರು ಆಚರಿಸೋ ಈ ದೀಪಾವಳಿ ಹಬ್ಬವನ್ನು ನ್ಯೂಯಾರ್ಕ್ನ ಸುಮಾರು 2 ಲಕ್ಷ ನಗರವಾಸಿಗಳು ಆಚರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಗುರುತಿಸಿಕೊಂಡು ನ್ಯೂಯಾರ್ಕ್ ನಗರದಲ್ಲಿ ಶಾಲಾ ರಜಾ ದಿನಗಳ ಪಟ್ಟಿಗೆ ದೀಪಾವಳಿ ಹಬ್ಬವನ್ನು ಸೇರಿಸಲಾಗಿದೆ ಎಂದು ಮೇಯರ್ ಎರಿಕ್ ಆಡಮ್ಸ್ ಸೋಮವಾರ ತಿಳಿಸಿದ್ದಾರೆ.
ಹೆಚ್ಚಾಗಿ ದೀಪಾವಳಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ದೀಪಾವಳಿ ಹಬ್ಬ ನವೆಂಬರ್ 12 ರಂದು ಇದ್ದು ಆ ದಿನ ಭಾನುವಾರದ ರಜೆ ಇದೆ. ಹೀಗಾಗಿ ಇದರ ಲಾಭ 2024ರ ದೀಪಾವಳಿಗೆ ಅಲ್ಲಿನ ಜನರಿಗೆ ಲಭಿಸಲಿದೆ.