ಅಬ್ಬಬ್ಬಾ ಏನ್ ಹುಚ್ಚು.. ವೀವ್ಸ್‌ಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ದುಸ್ಸಾಹಸ ಮಾಡಿದ ಯುವತಿ
ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೆ ಯುವತಿಯ ಪ್ರಾಣಕ್ಕೆ ಕುತ್ತು ಬರುತ್ತಿದ್ದು. ಈ ವಿಡಿಯೋದಲ್ಲಿ ಯುವತಿ ಕೇಲವ ಯುವಕ ಕೈ ಸಹಾಯದಲ್ಲಿ ಬಹುಮಹಡಿ ಕಟ್ಟಡದಿಂಡ ಸ್ಟಂಟ್ ಮಾಡಿದ್ದಾರೆ. ಆದರೆ ಇಲ್ಲಿ ಸುರಕ್ಷತೆಗೆ ಯಾವುದೇ ಸಾಧನ ಧರಿಸಿರಲಿಲ್ಲ. ರೀಲ್‌ನಲ್ಲಿ ಕಾಣಿಸಿಕೊಂಡಿರುವ ಮಹಿಳೆ, ನೆಲದಿಂದ ಅಂದಾಜು 100 ಅಡಿ ಎತ್ತರ ಇದ್ದಳು. ಕಟ್ಟಡದ ಮಹಡಿ ಮೇಲಿಂದ ಬಾಗಿ ಚಾಚಿದ್ದ ವ್ಯಕ್ತಿಯ ಕೈಯೊಂದರ ಹೊರತಾಗಿ ಆಕೆಯ ಸುರಕ್ಷತೆಗೆ ಬೇರೆ ಯಾವ ನೆರವೂ ಇರಲಿಲ್ಲ.
ಈ ವಿಡಿಯೋ ನೋಡಿದವರು ಅಚ್ಚರಿಪಟ್ಟಿದ್ದು, ಕೆಲವರು ಆಕ್ರೋಶ ಹೊರಹಾಕಿದ್ದಾರೆ.