ಬಾರ್ಬಡೋಸ್: ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ತೋರಿದ್ದರೂ ಟಿ20 ವಿಶ್ವಕಪ್ ನಲ್ಲಿ ಇದುವರೆಗೆ ಹಾರ್ದಿಕ್ ಪಾಂಡ್ಯ ಭಾರತಕ್ಕೆ ಆಪತ್ ಬಾಂಧವನಂತೆ ಆಡುತ್ತಿದ್ದಾರೆ. ಆದರೆ ಐಪಿಎಲ್ ನಲ್ಲಿ ತನ್ನಿಂದ ನಾಯಕತ್ವ ಕಸಿದುಕೊಂಡ ಹಾರ್ದಿಕ್ ಮೇಲೆ ರೋಹಿತ್ ಶರ್ಮಾಗೆ ಹೊಟ್ಟೆ ಉರಿಯಂತೆ! ಹೀಗಂತ ನೆಟ್ಟಿಗರು ಈಗ ಟ್ರೋಲ್ ಮಾಡುತ್ತಿದ್ದಾರೆ.
ಇದಕ್ಕೆ ಕಾರಣ ನಿನ್ನೆಯ ಕೆಲವು ಘಟನೆಗಳು. ಹಾರ್ದಿಕ್ ಪಾಂಡ್ಯ ನಿನ್ನೆ ಭಾರತಕ್ಕೆ ಅಗತ್ಯವಿದ್ದಾಗ ಉಪಯುಕ್ತವಾಗಿ ಆಡಿ 24 ಎಸೆತಗಳಿಂದ 32 ರನ್ ಗಳಿಸಿದರು. ಇದರಲ್ಲಿ ಎರಡು ಸಿಕ್ಸರ್ ಕೂಡಾ ಸೇರಿತ್ತು. ಈ ಪೈಕಿ ಒಂದು ಸಿಕ್ಸರ್ ಹೊಡೆದಾಗ ಭಾರತೀಯ ಡ್ರೆಸ್ಸಿಂಗ್ ರೂಂನಲ್ಲಿದ್ದ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರೂ ಖುಷಿಯಿಂದ ಚಪ್ಪಾಳೆ ತಟ್ಟುತ್ತಿದ್ದರು. ಆದರೆ ರೋಹಿತ್ ಮಾತ್ರ ಹುಳಿಮೋರೆ ಹಾಕಿಕೊಂಡು ಬೇಕೋ ಬೇಡವೋ ಎಂಬಂತೆ ಚಪ್ಪಾಳೆ ಹೊಡೆದರು. ಇದನ್ನು ನೋಡಿ ನೆಟ್ಟಿಗರು ಈ ಮನುಷ್ಯ ಒಂಥರಾ ಎಂದು ಟ್ರೋಲ್ ಮಾಡಿದ್ದಾರೆ.
ಇನ್ನು ಬೌಲಿಂಗ್ ನಲ್ಲೂ ಹಾರ್ದಿಕ್ ಗೆ ರೋಹಿತ್ ಕೇವಲ 2 ಓವರ್ ನೀಡಿದ್ದಾರೆ. ಆದರೆ ಬುಮ್ರಾ ಮತ್ತು ಅರ್ಷ್ ದೀಪ್ ಸಿಂಗ್ ಗೆ ಪೂರ್ತಿ 4 ಓವರ್ ನೀಡಿದ್ದಾರೆ. ಇದನ್ನೂ ಪಾಯಿಂಟ್ ಮಾಡಿರುವ ನೆಟ್ಟಿಗರು ರೋಹಿತ್ ಗೆ ಹಾರ್ದಿಕ್ ಕಂಡರೆ ಹೊಟ್ಟೆ ಉರಿ. ಅದಕ್ಕೆ ಹೀಗೆಲ್ಲಾ ಮಾಡಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.