ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮಾಡಕ್ಕೆ ಕೆಲ್ಸ ಇಲ್ಲ: ಪ್ಯಾಟ್ ಕುಮಿನ್ಸ್ ವಿವಾದಾತ್ಮಕ ಹೇಳಿಕೆ

Krishnaveni K

ಸೋಮವಾರ, 3 ಜೂನ್ 2024 (14:23 IST)
ಸಿಡ್ನಿ: ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮಾಡಕ್ಕೆ ಬೇರೆ ಕೆಲಸವೇ ಇಲ್ಲ. ನಿರುದ್ಯೋಗಿಗಳು ಅಂದರೆ ಇವರೇ ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕುಮಿನ್ಸ್ ಹೇಳಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಳೆಯ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಯಾರೋ ಹರಿಯಬಿಟ್ಟಿದ್ದಾರೆ. ಇದರಲ್ಲಿ ಕುಮಿನ್ಸ್ ಕೊಹ್ಲಿ ಅಭಿಮಾನಿಗಳ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇದೀಗ ವೈರಲ್ ಆಗಿದೆ.

ವಿಡಿಯೋದಲ್ಲಿ ಕುಮಿನ್ಸ್ ಮೊದಲು ವಿರಾಟ್ ಕೊಹ್ಲಿ ಬಗ್ಗೆ ಹೊಗಳುತ್ತಾರೆ. ಆರು ತಿಂಗಳ ಬಳಿಕ ಕೊಹ್ಲಿ ಶತಕ ಗಳಿಸಿದರು. ಆಗ ನೋಡಿದರೆ ನನ್ನ ಸೋಷಿಯಲ್ ಮೀಡಿಯಾ ಪುಟಗಳಲ್ಲಿ ಕೊಹ್ಲಿ ಅಭಿಮಾನಿಗಳು ಇನ್ನಿಲ್ಲದಂತೆ ಕಾಮೆಂಟ್ ಮಾಡುತ್ತಿದ್ದರು. ಕೊಹ್ಲಿ ಬಗ್ಗೆ ಏನೇ ಕಾಮೆಂಟ್ ಮಾಡಿದರೂ ಅವರ ಅಭಿಮಾನಿಗಳು ಇನ್ನಿಲ್ಲದಂತೆ ಕಾಡುತ್ತಾರೆ. ಅದು ಮುಂದಿನ ಕೆಲವು ವರ್ಷಗಳವರೆಗೆ ಮುಂದುವರಿಯುತ್ತದೆ. ಕೊಹ್ಲಿ ಅಭಿಮಾನಿಗಳಿಗೆ ಮಾಡಲು ಬೇರೆ ಕೆಲಸವೇ ಇಲ್ಲ’ ಎಂದು ಕುಮಿನ್ಸ್ ಹೇಳಿರುವ ವಿಡಿಯೋ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ