ಪುರಿ ಲೋಕಸಭಾ ಕ್ಷೇತ್ರ: ಸ್ಪರ್ಧೆಯಿಂದ ಹಿಂದೆ ಸರಿದ ಸುಚರಿತ, ಪಟ್ನಾಯಕ್‌ ಕೈ ಹೊಸ ಅಭ್ಯರ್ಥಿ

Sampriya

ಭಾನುವಾರ, 5 ಮೇ 2024 (14:06 IST)
ಭುವನೇಶ್ವರ: ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸುಚರಿತಾ ಮೊಹಂತಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ಅನ್ನು ವಾಪಸ್‌ ನೀಡಿದ ಬೆನ್ನಲ್ಲೇ ಜಯ ನಾರಾಯಣ್ ಪಟ್ನಾಯಕ್ ಅವರನ್ನು ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ.

ಸುಚರಿತಾ ಮೊಹಂತಿ ಅವರು ತಮಗೆ ಚುನಾವಣಾ ಪ್ರಚಾರದ ಖರ್ಚಿಗೆ ಪಕ್ಷದ ನಿಧಿಯಿಂದ ಹಣ ನೀಡಲು ಪಕ್ಷ ನಿರಾಕರಿಸಿದೆ ಎಂದು ಆರೋಪಿಸಿ ಸ್ಪರ್ಧಿಸಲು ನಿರಾಕರಿಸಿ, ಪಕ್ಷದ ಟಿಕೆಟ್‌ ಅನ್ನು ವಾಪಸ್‌ ನೀಡಿದ್ದರು.

ಪಟ್ನಾಯಕ್‌ ಅವರ ಉಮೇದುವಾರಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದಿಸಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರು ಹೊರಡಿಸಿರುವ ಹೇಳಿಕೆ ತಿಳಿಸಿದೆ.

ಹಣದ ಕೊರತೆಯಿಂದಾಗಿ ಪ್ರಚಾರ ನಡೆಸಲು ಆಗುತ್ತಿಲ್ಲ. ಪಕ್ಷದ ನಿಧಿಯಿಂದ ಹಣ ಬರದಿದ್ದರೆ ಪುರಿಯಲ್ಲಿ ಪ್ರಚಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳುವುದಕ್ಕೆ ನಾನು ವಿಷಾದಿಸುತ್ತೇನೆ. ಆದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತಳಾಗಿ ಮುಂದುವರಿತ್ತೇನೆ ಎಂದು ಮೊಹಂತಿ ಹೇಳಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಆ ಕ್ಷೇತ್ರದಲ್ಲಿ ಬಿಜೆಪಿಯ ಸಂಬಿತ್‌ ಪಾತ್ರ ಮತ್ತು ಬಿಜೆಡಿಯ ಅರೂಪ್‌ ಪಟ್ನಾಯಕ್‌ ಅವರು ಕಣದಲ್ಲಿದ್ದಾರೆ. ಮೇ 25ರಂದು ಮತದಾನ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ