ಅವಿಶ್ವಾಸ ಮತದಲ್ಲಿ ತನ್ನ ಬೆಂಬಲಕ್ಕೆ ನಿಂತ ಕಾಂಗ್ರೆಸ್ ವಿರುದ್ಧವೇ ಟಿಡಿಪಿ ಸಂಸದನ ವಾಗ್ದಾಳಿ
ಶುಕ್ರವಾರ, 20 ಜುಲೈ 2018 (11:44 IST)
ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡಿರುವ ಟಿಡಿಪಿ, ಇದೀಗ ತನ್ನ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ವಿರುದ್ಧವೇ ವಾಗ್ದಾಳಿ ನಡೆಸಿದೆ.
ಅವಿಶ್ವಾಸ ಗೊತ್ತುವಳಿ ಕುರಿತ ತನಗೆ ನೀಡಲಾಗಿರುವ ಸಮಯದಲ್ಲಿ ಚರ್ಚೆಗೆ ಮುಂದಾಗಿರುವ ಟಿಡಿಪಿ ಪರ ಸಂಸದ ಜಯದೇವ ಗಲ್ಲಾ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶ ವಿಭಜನೆ ಮಾಡಿದ್ದಕ್ಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮಗೆ ರಾಜಧಾನಿಯೂ ಇಲ್ಲ, ಆದಾಯವೂ ಇಲ್ಲ. ಆದಾಯ ತೆಲಂಗಾಣಕ್ಕೆ ಸಾಲ ನಮಗೆ ಕೊಡಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಬಳಿಕ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜಯದೇವ ಗಲ್ಲಾ ಕರ್ನಾಟಕದ ಜನಾರ್ಧನ ರೆಡ್ಡಿ ಕುಟುಂಬದ ವಿರುದ್ಧ ಪ್ರಕರಣಗಳಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಆಂಧ್ರಪ್ರದೇಶದ ಅಭಿವೃದ್ಧಿಗೆ ಮೋದಿ ಸರ್ಕಾರ ಏನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.