ಮಣಿಪುರ : ಭಾರತದ ಬೃಹತ್ ಧ್ವಜ ಹಿಡಿದು ರಾಹುಲ್ ಗಾಂಧಿ ಬಸ್ ಮೂಲಕ ಪಾದ ಯಾತ್ರೆ ಸ್ಥಳಕ್ಕೆ ಬಂದಿಳಿದರು. ಸಾವಿರಾರು ಮಂದಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ಮಣಿಪುರದ ಸ್ಥಳೀಯರು , ಯುವಜನತೆ, ಮಹಿಳೆಯರು ಮತ್ತು ಮಕ್ಕಳು ರಾಹುಲ್ ಗಾಂಧಿ ಅವರ ಕೈಕುಲುಕಲು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಭಾರತ್ ಜೋಡೋ ನ್ಯಾಯ ಯಾತ್ರೆ ಹೆಸರಿನಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನಡೆಸುತ್ತಿರುವ ರಾಷ್ಟ್ರಮಟ್ಟದ ಅಭಿಯಾನ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂಫಾಲಾ ಪಶ್ಚಿಮ ಭಾಗದ ಸೇಕ್ಮೈ ಪ್ರದೇಶದಿಂದ ರಾಹುಲ್ ಗಾಂಧಿ ಸೋಮವಾರ ತಮ್ಮ ಯಾತ್ರೆಯನ್ನು ಮುಂದುವರೆಸಿದ್ದಾರೆ.