ರಾಹುಲ್ ಗಾಂಧಿ ಹೊಸ ವರಸೆ! ಚುನಾವಣೆಗೆ ಮೊದಲು ರಾಜ್ಯದಲ್ಲೂ ಹಿಂದೂ ದೇಗುಲಗಳಿಗೆ ಭೇಟಿ ಸಾಧ್ಯತೆ

ಬುಧವಾರ, 3 ಜನವರಿ 2018 (09:18 IST)
ಬೆಂಗಳೂರು: ಇಷ್ಟು ದಿನ ದೇವಾಲಯಗಳಿಗೆ ಭೇಟಿ, ಧಾರ್ಮಿಕ ಕಾರ್ಯಕ್ರಮಗಳಿಂದ ದೂರವೇ ಇರುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಚುನಾವಣೆಯಲ್ಲಿ ಇದರಿಂದ ಕಂಡುಕೊಂಡ ಲಾಭವನ್ನು ಮತ್ತೆ ಕರ್ನಾಟಕದಲ್ಲೂ ಬಳಸಲು ಮುಂದಾಗಿದ್ದಾರೆ.
 

ಗುಜರಾತ್ ಚುನಾವಣೆ ಸಂದರ್ಭ ಸೋಮನಾಥ ದೇವಾಲಯ ಸೇರಿದಂತೆ ಅಲ್ಲಿನ ಪ್ರಸಿದ್ಧ ದೇಗುಲಗಳಿಗೆ ಪ್ರದಕ್ಷಿಣೆ ಹಾಕುತ್ತಿದ್ದ ರಾಹುಲ್ ಇದರಿಂದ ಲಾಭ ಪಡೆದುಕೊಂಡಿದ್ದರು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತ ಬಂದಿದ್ದವು.

ಅದನ್ನೇ ಕರ್ನಾಟಕ ಚುನಾವಣೆಯಲ್ಲೂ ಬಳಸಲು ಅವರು ಮುಂದಾಗಿದ್ದಾರೆ. ರಾಜ್ಯ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಶೃಂಗೇರಿ ಶಾರದಾ ಮಠ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಮತದಾರರನ್ನು ಓಲೈಸುವ ಲೆಕ್ಕಾಚಾರ ಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್ ಮುಸ್ಲಿಮರ ಪರ ಎನ್ನುವ ಹಣೆಪಟ್ಟಿ ತೊಡೆದು ಹಾಕಿ ಹಿಂದೂಗಳ ಪರವಾಗಿಯೂ ಇದೆ ಎಂದು ಬಿಂಬಿಸುವ ಯತ್ನ ನಡೆಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ